ETV Bharat / state

ಕೈಮುಗಿದು ಏರು ಇದು ಕನ್ನಡದ ತೇರು.. ಈ ಬಸ್​ ನಿರ್ವಾಹಕನ ಮಾತೃಭಾಷೆ ಪ್ರೇಮಕ್ಕೆ ವಂದನೆ - ಹಾವೇರಿ ಸಾರಿಗೆ ಸಿಬ್ಬಂದಿಯ ಕನ್ನಡ ಪ್ರೇಮಕ್ಕೆ ಸಲಾಂ

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಸಾರಿಗೆ ವಿಭಾಗದ ನಿರ್ವಾಹಕ ಶಶಿಧರ ಕಳೆದ ಮೂರು ವರ್ಷಗಳಿಂದ ತನಗೆ ನೀಡಿದ ಸಾರಿಗೆ ಬಸ್‌ನಲ್ಲಿ ಕರ್ನಾಟಕ ದರ್ಶನ ಮಾಡಿಸುತ್ತಿದ್ದಾರೆ.

Kannada Rajyotsava: Conductor Decorates Bus
ಹಾವೇರಿ ಸಾರಿಗೆ ಸಿಬ್ಬಂದಿಯ ಕನ್ನಡ ಪ್ರೇಮ..
author img

By

Published : Nov 1, 2022, 7:37 PM IST

ಹಾವೇರಿ: ಇಲ್ಲೊಂದು ಸಾರಿಗೆ ಬಸ್ ಇದೆ. ಈ ಬಸ್‌ನಲ್ಲಿ ಪಯಣಿಸುವ ಪ್ರಯಾಣಿಕ ತನ್ನ ಗಮ್ಯ ಸ್ಥಳವನ್ನೇ ಮರೆಯುತ್ತಾನೆ. ತಾನು ಇಳಿಯುವ ಸ್ಥಳ ಯಾಕೆ? ಇಷ್ಟು ಬೇಗ ಬಂತು ಎಂದು ಬೇಸರ ವ್ಯಕ್ತಪಡಿಸುತ್ತಾನೆ. ಈ ಬಸ್‌ನಲ್ಲಿ ಪಯಣ ಹೀಗೆ ಮುಂದುವರೆದರೆ ಎಷ್ಟು ಚೆನ್ನಾಗಿತ್ತು ಎಂದು ಕೊಳ್ಳುತ್ತಾನೆ. ಇದೇನಪ್ಪಾ?, ಇದ್ಯಾವ ಸಾರಿಗೆ ಬಸ್ ಅಂತೀರಾ ಈ ಸ್ಟೋರಿ ನೋಡಿ.

ಹಿರೇಕೆರೂರು ತಾಲೂಕು ಸಾರಿಗೆ ವಿಭಾಗದ ನಿರ್ವಾಹಕ ಶಶಿಧರ್ ಕಳೆದ ಮೂರು ವರ್ಷಗಳಿಂದ ತನಗೆ ನೀಡಿದ ಸಾರಿಗೆ ಬಸ್‌ನಲ್ಲಿ ಕರ್ನಾಟಕ ದರ್ಶನ ಮಾಡಿಸುತ್ತಿದ್ದಾರೆ.

ಬಸ್ಸಿನಲ್ಲಿ ಕರ್ನಾಟಕ ದರ್ಶನ: ಬಸ್‌ನಲ್ಲಿ ಕರ್ನಾಟಕದ 31 ಜಿಲ್ಲೆಗಳಿವೆ. ಜತೆಗೆ 31 ಜಿಲ್ಲೆಗಳ ಪ್ರವಾಸಿ ತಾಣಗಳ ಚಿತ್ರಗಳು ರಾಜ್ಯದ ಚಿತ್ರಣವನ್ನು ಕಣ್ಮುಂದೆ ತರುತ್ತವೆ. ರಾಜ್ಯದ ಪ್ರಮುಖ ಕವಿಗಳು, ಮಹಾಪುರುಷರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಪ್ರಮುಖ ನದಿಗಳು, ಪ್ರತಿ ಜಿಲ್ಲೆಯಲ್ಲಿನ ತಾಲೂಕುಗಳು ಸೇರಿ ಬಸ್​ ಸಂಪೂರ್ಣ ಕನ್ನಡಮಯವಾಗಿದೆ.

ಹಾವೇರಿ ಸಾರಿಗೆ ಸಿಬ್ಬಂದಿಯ ಕನ್ನಡ ಪ್ರೇಮ..

ಅಕ್ಷರಶಃ ಕನ್ನಡ ತೇರಾಗಿರುವ ಈ ಬಸ್‌ ನೋಡುವ ಕಣ್ಣಿಗೆ ಹಬ್ಬ. ಕನ್ನಡಾಂಬೆ ಭುವನೇಶ್ವರಿ ಮೂರ್ತಿ ಇರುವ ಈ ಬಸ್‌ನಲ್ಲಿ ಪ್ರತಿ ಆಸನದಲ್ಲಿ ಕನ್ನಡ ಪುಸ್ತಕ ಇರಿಸಲಾಗಿದೆ. ಇಂದಿನ ದಿನಪತ್ರಿಕೆ, ವಾರ ಪತ್ರಿಕೆ ಸೇರಿದಂತೆ ಕನ್ನಡದ ಮಹಾ ನಟರು, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳಿವೆ.

ಇದನ್ನೂ ಓದಿ: ನಡೆ ಕನ್ನಡ, ನುಡಿ ಕನ್ನಡ.. ಸಾರಿಗೆ ಸಂಸ್ಥೆ ಬಸ್​​ನ್ನೇ ಕನ್ನಡಮಯವಾಗಿಸಿದ್ರು ಈ ವಿಶಿಷ್ಟ ಬಸ್ ಚಾಲಕ

ಮಾರ್ಗದುದ್ದಕ್ಕೂ ಕನ್ನಡದ ಕಂಪು: ಈ ಬಸ್‌ನಲ್ಲಿ ಟೇಪ್ ರೆಕಾರ್ಡರ್ ಸಹ ಅಳವಡಿಸಲಾಗಿದೆ. ಕನ್ನಡ ಪ್ರೇಮ ಮೆರೆಯುವ ಗೀತೆಗಳು ಪ್ರಯಾಣಿಕರ ಕಿವಿಗೆ ರಿಂಗಣಿಸುತ್ತವೆ. ಈ ಬಸ್ ಹಿರೇಕೆರೂರಿಂದ ಬೆಳಗಾವಿ ವಿಭಾಗಕ್ಕೆ ಪ್ರತಿದಿನ ಸಂಚರಿಸುತ್ತದೆ. ತಾನು ಸಂಚರಿಸುವ ಮಾರ್ಗದುದ್ದಕ್ಕೂ ಕನ್ನಡದ ಕಂಪು ಸೂಸುತ್ತದೆ.

'ಬಸ್‌ನಲ್ಲಿ ಪಯಣಿಸುವ ಪ್ರಯಾಣಿಕರಿಗೆ ಕನ್ನಡ ಅಭಿಮಾನ ಹೆಚ್ಚಿಸುತ್ತದೆ. ಈ ಬಸ್‌ನಲ್ಲಿ ಪಯಣಿಸಿದರೆ ಸಾಕು, ಪೂರ್ಣ ಕರ್ನಾಟಕ ಸುತ್ತಿ ಬಂದಂತೆ ಆಗುತ್ತದೆ. ಇಂತಹ ಬಸ್‌ನಲ್ಲಿ ಪ್ರಯಾಣಿಸುವುದೇ ನಮಗೆ ಹೆಮ್ಮೆ' ಎನ್ನುತ್ತಾರೆ ಪ್ರಯಾಣಿಕರು.

ಬಸ್ ನಿರ್ವಾಹಕ ಶಶಿಧರ್​ ಅವರು ಪ್ರತಿ ವರ್ಷ ಸಾರಿಗೆ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತ ಬಂದಿರುವುದು ಇನ್ನೊಂದು ವಿಶೇಷ. ಸಾರಿಗೆ ಇಲಾಖೆಯ ಬಸ್‌ಗಳೆಂದರೆ ಸಾಕು, ಮೂಗು ಮುರಿಯವವರೇ ಅಧಿಕವಾಗುತ್ತಿರುವ ಈ ದಿನಗಳಲ್ಲಿ ಈ ಬಸ್ ಕನ್ನಡ ನಾಡಿನ ದರ್ಶನ ಮಾಡಿಸುತ್ತದೆ.

ನಿರ್ವಾಹಕ ಶಶಿಧರ್‌ಗೆ ಚಾಲಕ ಆಂಜನೇಯ ಸಾಥ್ ನೀಡಿದ್ದು, ಬಸ್ ಮತ್ತಷ್ಟು ಕನ್ನಡದ ಕಂಪು ಬೀರುತ್ತದೆ. ಪ್ರಸ್ತುತ ಹಿರೇಕೆರೂರುನಿಂದ ಬೆಳಗಾವಿಗೆ ಸಂಚರಿಸುವ ಈ ಬಸ್‌ನಲ್ಲಿ ನವೆಂಬರ್ ತಿಂಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗುವ ಇಂಗಿತವನ್ನು ನಿರ್ವಾಹಕ ಶಶಿಧರ್ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನ್ನಡ ಬಳಕೆಗೆ ಕಾನೂನು ಚೌಕಟ್ಟು, ಅಧಿವೇಶನದಲ್ಲಿ ಕನ್ನಡ ಕಡ್ಡಾಯ ಮಸೂದೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.