ರಾಣೆಬೆನ್ನೂರು: ಸಂಸ್ಕಾರ, ಸಾಹಿತ್ಯ, ಕಲೆ, ಆಚಾರ-ವಿಚಾರಗಳಿಗೆ ಕನ್ನಡ ಭಾಷೆ ಹೆಸರುವಾಸಿ. ಅಲ್ಲದೆ, ಕನ್ನಡ ನಾಡಿಗೆ ಅನೇಕ ಮಹಾತ್ಮರನ್ನು ಕೊಡುಗೆಯಾಗಿ ನೀಡಿದೆ ಎಂದು ನಿರ್ದೇಶಕ ಟಿ.ಎಸ್.ನಾಗಾಭರಣ ಹೇಳಿದರು.
ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ದೇಶದ ಸಂಪತನ್ನು ಲೂಟಿ ಮಾಡಿದರು. ಆದರೆ, ನಾವು ಅದನ್ನು ಮೆಟ್ಟಿ ನಿಂತು ಮತ್ತೆ ಕಲೆ, ಸಾಹಿತ್ಯ, ಸಂಪತ್ತನ್ನು ಬೆಳಸಿದ್ದೇವೆ ಎಂದರು.
ನಾಡಿನಲ್ಲಿ ಹಿಂದೆ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿತ್ತು. ಆದರೆ ಇಂದು ನಾಡು ನುಡಿ ಹಾಗೂ ಭಾಷಾಭಿಮಾನದಿಂದ ಕನ್ನಡ ಮಾತನಾಡುವರು ಹೆಚ್ಚಾಗಿದ್ದಾರೆ. ಇದರಿಂದ ಕನ್ನಡ ಮತ್ತೆ ಬಲಿಷ್ಠವಾಗಿ ಬೆಳೆಯಲಾರಂಭಿಸಿದೆ. ಕನ್ನಡ ಕಟ್ಟುವ ಕೆಲಸವನ್ನು ನಮ್ಮವರು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಚಿಂತಕ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಇತರರು ಇದ್ದರು.