ETV Bharat / state

ಕನಕದಾಸರು ಸಮಾಜದ ಅಸಮಾನತೆ ತೊಲಗಿಸಲು ಬಯಸಿದ್ದರು: ಸಿಎಂ ಸಿದ್ದರಾಮಯ್ಯ

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ‌ ಕಾಗಿನೆಲೆಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು.

CM Siddaramaiah inaugurated the Kanakadasa Jayanti programme.
ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.
author img

By ETV Bharat Karnataka Team

Published : Nov 29, 2023, 8:37 PM IST

Updated : Nov 29, 2023, 8:52 PM IST

ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಹಾವೇರಿ:ಕನಕದಾಸರು ದಾಸ ಶ್ರೇಷ್ಠರು ಮಾತ್ರ ಅಲ್ಲ,ಸಮಾಜದ ಅಸಮಾನತೆ ತೊಲಗಿಸಲು ಬಯಸಿದ್ದವರು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ‌ ಕಾಗಿನೆಲೆಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನಕ್ಷರತೆಯಿಂದ, ಜಾತಿ ವ್ಯವಸ್ಥೆಯಿಂದ ಅಸಮಾನತೆ ಸಮಾಜದಲ್ಲಿ ಬಂದಿದೆ. ಜಾತಿ ವ್ಯವಸ್ಥೆ ಹುಟ್ಟು ಹಾಕಿಕೊಂಡವರು ನಾವೇ, ಯಾವ ಧರ್ಮದಲ್ಲಿಯೂ ಜಾತಿ ಮಾಡಿ ಅಂಥ ಹೇಳಿಲ್ಲ.

ಮನುಷ್ಯರನ್ನು ದ್ವೇಷಿಸು ಅಂತ ಹೇಳಿಲ್ಲ. ಮನುಷ್ಯರನ್ನು ಕ್ರೂರವಾಗಿ ನಡೆಸಿಕೊಳ್ಳಬೇಕೆಂದು ಹೇಳಿಲ್ಲ, ದುರ್ಬಲ ವರ್ಗದವರ ಮಹಿಳೆಯರ ಮೇಲೆ ದೌರ್ಜನ್ಯ ಮಾಡಲಿ ಅಂಥ ಹೇಳಿಲ್ಲ. ಜಾತಿ ವ್ಯವಸ್ಥೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡು ಸಮಾಜದಲ್ಲಿ ಅಸಮಾನತೆ ಸೃಷ್ಟಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಯೊಬ್ಬರು ವಿಶ್ವಮಾನವರಾಗಬೇಕು:ನಾವು ಮೂಲತಃ ಮನುಷ್ಯರು, ನಾವು ಅರ್ಜಿ ಹಾಕಿಕೊಂಡು ಹುಟ್ಟಿದ್ದೇವಾ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ , ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕು. ಅದು ನಿಜವಾದ ಭಾವೈಕ್ಯತೆ. ಕುವೆಂಪು ಒಂದು ಕಡೆ ನಾವೆಲ್ಲರು ಹುಟ್ಟುತ್ತಲೇ ವಿಶ್ವಮಾನವರು ಅಂತಾರೆ, ಅದರೆ ಬೆಳೆಯುತ್ತ ಅಲ್ಪ ಮಾನವರು ಎಂದು ಬರೆದಿದ್ದಾರೆ. ನಾವೆಲ್ಲರೂ ವಿಶ್ವಮಾನವರಾಗಬೇಕು ಎಂದು ಸಿಎಂ ಸಲಹೆ ನೀಡಿದರು.

ನಾವು ಕುರುಬರ ಮಠ ಆಗಬೇಕು ಅಂತಾ ಮಠ ಮಾಡಲಿಲ್ಲ. ಶೋಷಿತರನ್ನು ಇಟ್ಟುಕೊಂಡು ಮಠ ಮಾಡಿದ್ದೇವೆ. ಕನಕ ಗುರುಪೀಠ ಮಾಡಿದ್ದೇವೆ. ಧರ್ಮ ಇರುವುದು ನಮಗೋಸ್ಕರ ಧರ್ಮಕೊಸ್ಕರ ನಾವಿಲ್ಲ. ಮನುಷ್ಯತ್ವ ಬೆಳೆಸಿಕೊಳ್ಳಬೇಕು. ಅಸೂಯೆ ಬಿಡಬೇಕು‌ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಅದಕ್ಕೆ ಶರಣರು ಹೇಳಿದ್ದಾರೆ. ದಯವೇ ಧರ್ಮ ಮೂಲವಯ್ಯ. ದಯವಿಲ್ಲದ ಧರ್ಮ ಯಾವುದಯ್ಯ ಎನ್ನುವ ಮೂಲಕ ಸಿ.ಎಂ ಸಿದ್ದರಾಮಯ್ಯ ಶರಣರ ವಚನವನ್ನು ಉಚ್ಛರಿಸಿದರು. ಶರಣರ ವಚನ ಹೇಳಿ ನೀನು ಯಾವ ಜಾತಿ ಅಂತಾ ಅವನು ಅಂತಾ ಕೇಳಿದ್ರೆ ಅದು ಭಾವೈಕ್ಯತೆಯಾ ಎಂದು ಪ್ರಶ್ನಿಸಿದರು. ಕನಕದಾಸರ ಸಾಹಿತ್ಯದಲ್ಲಿ ಮನುಷ್ಯತ್ವ ಇದೆ. ಸಂಸ್ಕೃತ ಭಾಷೆಯಲ್ಲಿ ಸಾಹಿತ್ಯ ಹೇಳಿದ್ರೆ ಜನರಿಗೆ ಏನೋ ಗೊತ್ತಾಗುವುದಿಲ್ಲ ಅಂಥ ಆಡು ಭಾಷೆಯಲ್ಲಿ ಪದಗಳನ್ನು ಹೇಳಿದ್ದಾರೆ. ಜಾತಿ ಇನ್ನು ಹೋಗಿಲ್ಲ. ಜಾತಿ ವ್ಯವಸ್ಥೆ ಕಡಿಮೆಯಾಗಬೇಕು ಅಂದರೆ ಆರ್ಥಿಕ, ಶೈಕ್ಷಣಿಕ ಮುಂದುವರಿಯಬೇಕು ಎಂದು ತಿಳಿಸಿದರು.

ಜಾತಿ ವ್ಯವಸ್ಥೆ ಸೇರಿ ರಾಜಕಾರಣ ಕೆಟ್ಟು ಹೋಗಿದೆ : ಇಂಥ ಭಾವೈಕ್ಯತೆ ಕಾರ್ಯಕ್ರಮಗಳು ನಡೆಯಬೇಕು. ಈ ರಾಜಕಾರಣದಲ್ಲಿ ಜಾತಿ ವ್ಯವಸ್ಥೆ ಸೇರಿ ಅದು ಈಗ ಕೆಟ್ಟು ಹೋಗಿದೆ. ಇದು ಸೇವೆ ಮಾಡುವ ಕೆಲಸ, ಇದು ಸಮಾಜಸೇವೆ. ನಾವು ಅರ್ಜಿ ಹಾಕಿಕೊಂಡು ಬಂದಿಲ್ಲ. ಯಾವ ರಾಜಕಾರಣಿ ಜಾತಿ ಮಾಡಬಾರದು. ರಾಜಕಾರಣ ಇದೊಂದು ಸಮಾಜ ಸೇವೆ. ಸಂವಿಧಾನವೇ ನಮ್ಮ ಧರ್ಮ, ಅದರ ಪ್ರಕಾರ ನಡೆದುಕೊಳ್ಳುವುದು ನಮ್ಮ ಧರ್ಮ. ನಾನು ಮುಖ್ಯಮಂತ್ರಿ ಆದಾಗ ಅನೇಕ ಜನಪರ ಕೆಲಸ ಮಾಡಿದ್ದೇವೆ. ಹಿಂದೆ ಮಾಡಿದ್ದೇನೆ ಈಗ ಮಾಡಿದ್ದೇನೆ ‌ಮುಂದೆ ಸಹ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ತೆಲಗಾಂಣ ಸಿಎಂಗೆ ತಿರುಗೇಟು: ನಾವು ಗ್ಯಾರಂಟಿ ನೀಡಿದ್ದೇವೆ. ಆದರೆ, ತೆಲಂಗಾಣದ ಸಿ ಎಂ ಗ್ಯಾರಂಟಿ ಕೊಟ್ಟಿಲ್ಲ ಡೊಂಗಿ ಅಂದರು. ಅದಕ್ಕೆ ಚಂದ್ರಶೇಖರ್​ಗೆ ತೋರಿಸುತ್ತೇನೆ ಬಾ ಅಂತಾ ಕರೆದಿದ್ದೇ, ಅವರು ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಬ್ಬಳ್ಳಿ ಮೂರು ಸಾವಿರಮಠದ ಗುರುಸಿದ್ದ ರಾಜಯೋಗೇಂದ್ರ ಶ್ರೀಗಳು, ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಸಚಿವ ಮದು ಬಂಗಾರಪ್ಪ, ಭೈರತಿ ಸುರೇಶ್ ಮತ್ತು ಶಿವಾನಂದ ಪಾಟೀಲ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಇದನ್ನೂಓದಿ:ಗ್ರಾಮೀಣ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸಿಎಸ್ಆರ್ ನಿಧಿ ಮೀಸಲಿಡಿ: ಉದ್ಯಮಿಗಳಿಗೆ ಡಿಕೆಶಿ ಕರೆ

Last Updated : Nov 29, 2023, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.