ETV Bharat / state

ಹಾವೇರಿಯಲ್ಲಿ ಜೋಕುಮಾರಸ್ವಾಮಿ ಹೊತ್ತು ಸಂಭ್ರಮಿಸಿದ ವಿದ್ಯಾರ್ಥಿನಿಯರು

ಹಾವೇರಿಯ ಗೆಳೆಯರ ಬಳಗ ಪ್ರೌಢಶಾಲೆಯಲ್ಲಿ ಶನಿವಾರದಂದು ಜೋಕುಮಾರಸ್ವಾಮಿ ಹಬ್ಬ ಆಚರಿಸಲಾಯಿತು. ಜೋಕುಮಾರಸ್ವಾಮಿಯ ಜನನ, ಜೀವನ ಮತ್ತು ಮರಣದ ಕುರಿತಂತೆ ವಿದ್ಯಾರ್ಥಿನಿಯರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

jokumaraswamy festival celebration at haveri school
ಜೋಕುಮಾರಸ್ವಾಮಿ ಹಬ್ಬ ಆಚರಣೆ
author img

By

Published : Sep 26, 2021, 7:37 AM IST

ಹಾವೇರಿ: ನಗರದ ಗೆಳೆಯರ ಬಳಗ ಪ್ರೌಢಶಾಲೆ ಶನಿವಾರದಂದು ವಿಶಿಷ್ಟ ಆಚರಣೆಗೆ ಸಾಕ್ಷಿಯಾಯಿತು. ಶಾಲಾ ಆಡಳಿತ ಮಂಡಳಿ ಏಕೀಕರಣ ಸಮಿತಿ ಇದೇ ಪ್ರಥಮ ಬಾರಿಗೆ ಶಾಲೆಯಲ್ಲಿ ಜೋಕುಮಾರಸ್ವಾಮಿಯ ಪ್ರಾತ್ಯಕ್ಷಿಕೆ ಏರ್ಪಡಿಸಿತ್ತು.

10 ವಿದ್ಯಾರ್ಥಿನಿಯರ ಒಂದು ತಂಡದಂತೆ ಆರು ತಂಡಗಳು ಜೋಕುಮಾರಸ್ವಾಮಿ ಕುರಿತು ಪ್ರದರ್ಶನ ನೀಡಿದವು. ಜೋಕುಮಾರಸ್ವಾಮಿಯ ಜನನ, ಜೀವನ ಮತ್ತು ಮರಣದ ಕುರಿತಂತೆ ವಿದ್ಯಾರ್ಥಿನಿಯರು ವಿವರಣೆ ನೀಡಿದರು. ಜೋಕುಮಾರಸ್ವಾಮಿಯ ಹಾಡುಗಳು ಪ್ರಾತ್ಯಕ್ಷಿಕೆಗೆ ಮತ್ತಷ್ಟು ಮೆರುಗು ತಂದವು.

ಜೋಕುಮಾರಸ್ವಾಮಿ ಹಬ್ಬ ಆಚರಣೆ

ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯೊಂದಿಗೆ ಹಲವು ಆಚರಣೆಗಳು ಗರಿಗೆದರುತ್ತವೆ. ಅಂತಹ ಆಚರಣೆಗಳಲ್ಲಿ ಒಂದು ಜೋಕುಮಾರಸ್ವಾಮಿಯ ಪೂಜೆ. ಜೋಕುಮಾರಸ್ವಾಮಿ ವಿಶಿಷ್ಟ ಜನನ, ಜೀವನ ಮತ್ತು ಮರಣದ ಮೂಲಕ ಗಮನ ಸೆಳೆಯುತ್ತಾನೆ. ಇವನ ಜೀವನ ಕಟ್ಟಿಕೊಡುವ ಜೋಕುಮಾರಸ್ವಾಮಿಯ ಪ್ರಾತ್ಯಕ್ಷಿಕೆಯ ಸ್ಪರ್ಧೆಯನ್ನು ಗೆಳೆಯರ ಬಳಗ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.

ಪ್ರಸ್ತುತ ಆಧುನಿಕತೆ, ಜಾಗತೀಕರಣದ ನಡುವೆ ಹಲವು ಜಾನಪದ ಆಚರಣೆಗಳು ಕಣ್ಮರೆಯಾಗುತ್ತಿವೆ. ಇಂತಹ ದಿನಗಳಲ್ಲಿ ಮಕ್ಕಳಿಗೆ ಜೋಕುಮಾರಸ್ವಾಮಿ ಆಚರಣೆ ಮಹತ್ವ ತಿಳಿಸಲು ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಆಯೋಜಕರು ತಿಳಿಸಿದರು.

ಇದನ್ನೂ ಓದಿ: ಜನಪರ ಆಡಳಿತದ ಮೂಲಕ ಜನತೆಯ ವಿಶ್ವಾಸ ವೃದ್ಧಿಗೆ ಒತ್ತು: ಸಿಎಂ ಬಸವರಾಜ ಬೊಮ್ಮಾಯಿ

ಪ್ರೌಢಶಾಲೆಯ ತಲಾ 10 ವಿದ್ಯಾರ್ಥಿನಿಯರ ಆರು ತಂಡಗಳು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದವು. ವಿದ್ಯಾರ್ಥಿನಿಯರು ಸೀರೆಯುಟ್ಟು ಜೋಕುಮಾರಸ್ವಾಮಿಯ ಬುಟ್ಟಿಯನ್ನ ಹೊತ್ತು ತಂದರು. ಶಾಲೆಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಜೋಕುಮಾರಸ್ವಾಮಿ ಪ್ರಾತ್ಯಕ್ಷಿಕೆ ಮನಸ್ಸಿಗೆ ಸಂತಸ ತಂದಿದೆ ಎಂಬ ಅಭಿಪ್ರಾಯವನ್ನ ವಿದ್ಯಾರ್ಥಿನಿಯರು ವ್ಯಕ್ತಪಡಿಸಿದರು.

ಆರು ತಂಡದವರು ಒಂದಕ್ಕಿಂತ ಒಂದು ಸುಂದರವಾಗಿ ಜೋಕುಮಾರನ ಬುಟ್ಟಿ ಹೊತ್ತು ತಂದಿದ್ದವು. ಜೊತೆಗೆ ಜೋಕುಮಾರನ ಅಂಬಲಿ, ಕಾಡಿಗೆ, ಬೆಣ್ಣಿ ಉಲ್ಪಿಯನ್ನ ತಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.