ETV Bharat / state

ಹಾನಗಲ್ ತಾಲೂಕು ಆಸ್ಪತ್ರೆಯ ಜನೌಷಧಿ ಕೇಂದ್ರ ಬಂದ್​: ರೋಗಿಗಳ ಪರದಾಟ

author img

By

Published : Dec 23, 2021, 7:31 AM IST

ಹಾನಗಲ್ ತಾಲೂಕು ಆಸ್ಪತ್ರೆಗೆ ನೂರಕ್ಕೂ ಅಧಿಕ ಗ್ರಾಮಗಳ ಜನರು ಪ್ರತಿದಿನ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಅದರಲ್ಲೂ ಬಡರೋಗಿಗಳೇ ಅಧಿಕವಾಗಿ ಬರುತ್ತಾರೆ. ಕಳೆದ ನಾಲ್ಕು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದ ಜನೌಷಧಿ ಕೇಂದ್ರವನ್ನು ಬಂದ್ ಮಾಡಲಾಗಿದ್ದು, ಪರಿಣಾಮ ಬಡರೋಗಿಗಳು ಅಧಿಕ ಹಣ ನೀಡಿ ಖಾಸಗಿ ಅಂಗಡಿಗಳಲ್ಲಿ ಔಷಧಿ ಖರೀದಿಸುತ್ತಿದ್ದಾರೆ.

Jan Aushadhi Kendra
ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಬಂದ್​ ಆದ ಜನೌಷಧಿ ಕೇಂದ್ರ

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕು ಆಸ್ಪತ್ರೆಯ ಬಡ ರೋಗಿಗಳು ಇದೀಗ ಔಷಧಿಗಾಗಿ ಪರದಾಡುತ್ತಿದ್ದಾರೆ. ಇವರ ಪರದಾಟಕ್ಕೆ ಕಾರಣ ತಾಲೂಕು ಆಸ್ಪತ್ರೆಯಲ್ಲಿದ್ದ ಜನೌಷಧಿ ಕೇಂದ್ರ ಕಳೆದ ನಾಲ್ಕು ತಿಂಗಳಿನಿಂದ ಬಂದ್ ಆಗಿರುವುದು. ಪರಿಣಾಮ ಬಡರೋಗಿಗಳು ಅಧಿಕ ಹಣ ನೀಡಿ ಖಾಸಗಿ ಅಂಗಡಿಗಳಲ್ಲಿ ಔಷಧಿ ಖರೀದಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಔಷಧಿ ವಿತರಿಸುತ್ತಿದ್ದರೂ ಜನೌಷಧಿ ಕೇಂದ್ರದಲ್ಲಿ ಸಿಗುವ ಔಷಧಿಗಳು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ. ವಿಪರ್ಯಾಸ ಅಂದ್ರೆ ಜನೌಷಧಿ ಜಾರಿಗೆ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಪ್ರತಿನಿಧಿಸುವ ಪಟ್ಟಣದಲ್ಲಿಯೇ ಜನೌಷಧಿ ಕೇಂದ್ರ ಬಂದ್ ಆಗಿದೆ.

ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಬಂದ್​ ಆದ ಜನೌಷಧಿ ಕೇಂದ್ರ.. ರೋಗಿಗಳಿಗೆ ಸಂಕಷ್ಟ

ಮಧುಮೇಹಿಗಳು, ರಕ್ತದೊತ್ತಡ, ಗರ್ಭಿಣಿಯರು ಸೇರಿದಂತೆ ಚಿಕ್ಕಮಕ್ಕಳಿಗೆ ಜನೌಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಔಷಧಿ ಸಿಗುತ್ತಿತ್ತು. ಆದರೆ ಈ ರೋಗಿಗಳು ಈಗ ಅಧಿಕ ಹಣ ನೀಡಿ ಖಾಸಗಿ ಅಂಗಡಿಗಳಲ್ಲಿ ಔಷಧಿ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಕಳೆದ ಅಗಸ್ಟ್​ನಿಂದ ರೋಗಿಗಳ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿ, ಅಧಿಕಾರಿಗಳಿಗೆ, ಡಿಹೆಚ್ಒ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಜನರ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಹಾನಗಲ್ ತಾಲೂಕು ಆಸ್ಪತ್ರೆಗೆ ನೂರಕ್ಕೂ ಅಧಿಕ ಗ್ರಾಮಗಳ ಜನರು ಪ್ರತಿದಿನ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಅದರಲ್ಲೂ ಬಡರೋಗಿಗಳೇ ಅಧಿಕವಾಗಿ ಬರುತ್ತಾರೆ. ಸಂಸದರ ಸ್ವಪಟ್ಟಣದಲ್ಲಿನ ಜನೌಷಧಿ ಕೇಂದ್ರವೇ ಈ ರೀತಿಯಾದ್ರೆ ಬೇರೆ ತಾಲೂಕುಗಳ ಜನೌಷಧಿ ಕೇಂದ್ರಗಳ ಗತಿ ಏನು ಎಂದು ಇಲ್ಲಿಯ ರೋಗಿಗಳು ಪ್ರಶ್ನಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.