ETV Bharat / state

ಹಾವೇರಿಯಲ್ಲಿ ಇಂದಿರಾ ಕ್ಯಾಂಟೀನ್ ಬಂದ್: ಇನ್ನೆಲ್ಲಿಂದ ಉಚಿತ ಊಟ? - ಹಾವೇರಿಯಲ್ಲಿ ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಆಹಾರ

ಹಾವೇರಿಯ ಇಂದಿರಾ ಕ್ಯಾಂಟೀನ್ ಬಂದ್ ಆಗಿದ್ದು, ಲಾಕ್ ಡೌನ್ ಅವಧಿಯಲ್ಲಿ ಸರ್ಕಾರ ಘೋಷಣೆ ಮಾಡಿದ ಉಚಿತ ಆಹಾರ ಬಡ ಜನರಿಗೆ ಸಿಗದಂತಾಗಿದೆ.

Indira Canteen Closed in Haveri
ಹಾವೇರಿಯಲ್ಲಿ ಇಂದಿರಾ ಕ್ಯಾಂಟೀನ್ ಬಂದ್
author img

By

Published : May 12, 2021, 2:16 PM IST

ಹಾವೇರಿ: ಲಾಕ್​ ಡೌನ್​ ಅವಧಿಯಲ್ಲಿ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಆಹಾರ ವಿತರಣೆಗೆ ಪೌರಾಡಳಿತ ಇಲಾಖೆ ಆದೇಶ ನೀಡಿದೆ. ಆದರೆ, ಹಾವೇರಿಯಲ್ಲಿ ಕ್ಯಾಂಟೀನ್ ಬಂದ್ ಆಗಿದೆ.

ನಗರದ ಇಂದಿರಾ ಕ್ಯಾಂಟೀನ್​ ಬಾಗಿಲು ಮುಚ್ಚಿ ದಿನಗಳೇ ಕಳೆದಿವೆ. ದಿನನಿತ್ಯ ಇಲ್ಲಿಗೆ ಹಲವಾರು ಜನ ಬಂದು ಬಾಗಿಲು ಹಾಕಿದ್ದನ್ನು ನೋಡಿ ವಾಪಸ್ ಹೋಗುತ್ತಿದ್ದಾರೆ. ಸರ್ಕಾರವೇನೋ ಉಚಿತ ಆಹಾರ ವಿತರಣೆ ಅಂತ ಘೋಷಣೆ ಮಾಡಿ ಬಿಟ್ಟಿದೆ. ಆದರೆ, ನಗರದಲ್ಲಿ ಕ್ಯಾಂಟೀನ್​ಗಳು ಬಂದ್ ಆಗಿರುವುದರಿಂದ ಉಚಿತ ಬಿಡಿ, ದುಡ್ಡು ಕೊಟ್ಟರೂ ಆಹಾರ ಸಿಗುತ್ತಿಲ್ಲ. ಇದರಿಂದ ಜನ ಸಮಸ್ಯೆ ಎದುರಿಸುವಂತಾಗಿದೆ.

ಇದನ್ನೂ ಓದಿ: ಲಾಕ್​ಡೌನ್​.. ಹಸಿದರ ಹೊಟ್ಟೆ ತುಂಬಿಸಿದ ಚಾಮರಾಜಪೇಟೆ ಪೊಲೀಸರು..

ಲಾಕ್​ ಡೌನ್​ನಿಂದಾಗಿ ಹೋಟೆಲ್​ಗಳು ಬಂದ್​ ಆಗಿವೆ. ಒಂದು ವೇಳೆ ಓಪನ್ ಇದ್ದರೂ ಬಡ ಜನರು ಅಲ್ಲಿ ಹೋಗಿ ಊಟ ಮಾಡುವಷ್ಟು ಸಬಲರಲ್ಲ. ಹಾಗಾಗಿ, ಬಡ ಜನರಿಗಾಗಿ ಸ್ಥಾಪಿಸಲಾಗಿರುವ ಕ್ಯಾಂಟೀನ್ ತೆರೆದು ಆಹಾರ ಪೂರೈಕೆ ಮಾಡಿದರೆ, ಲಾಕ್​ ಡೌನ್​ ಅವಧಿಯಲ್ಲಿ ಜನ ಹಸಿವಿನಿಂದ ಪರದಾಡುವುದನ್ನು ತಪ್ಪಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.