ಹಾವೇರಿ : ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ತಮ್ಮ ಕ್ಷೇತ್ರದ ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಿದರು.
ಬಾಡ ಮತ್ತು ಬಂಕಾಪುರ ಸೇರಿದಂತೆ ತಾಲೂಕುಗಳಲ್ಲಿನ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ ಸಚಿವ ಬೊಮ್ಮಾಯಿ, ಸೋಂಕಿತರ ಆರೋಗ್ಯ ವಿಚಾರಿಸಿದರು.
ಸೆಂಟರ್‌ಗಳಲ್ಲಿ ಸರಿಯಾದ ಚಿಕಿತ್ಸೆಗೆ ಮೂಲಸೌಲಭ್ಯ ಮತ್ತು ಊಟ ನೀಡುವಿಕೆ ಕುರಿತಂತೆ ಸೋಂಕಿತರಿಂದ ಮಾಹಿತಿ ಪಡೆದರು. ಕೋವಿಡ್ ಕೇರ್ ಸೆಂಟರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.
ಸೋಂಕಿತರು ಇಲ್ಲಿಂದ ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ. ಈ ರೀತಿ ಎಲ್ಲ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದರೆ ಒಳ್ಳೆಯದು ಎಂದ್ರು.
ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರ ಆಕ್ಸಿಜನ್ 90ಕ್ಕಿಂತ ಕೆಳಗೆ ಬಂದರೆ ಅವರನ್ನ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸುವುದಾಗಿ ಬೊಮ್ಮಾಯಿ ತಿಳಿಸಿದರು. ಇದೇ ವೇಳೆ ಕೆಲವು ಕೋವಿಡ್ ಕೇರ್ ಸೆಂಟರ್‌ಗಳಿಗೆ ಬೊಮ್ಮಾಯಿ ಕಾನ್ಸಂಟ್ರೇಟರ್ ವಿತರಿಸಿದರು.
ರಾಜ್ಯ ಸಂಪರ್ಕಿಸುವ ಗಡಿಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ: ಕೊರೊನಾ ನೆಗೆಟಿವ್ ಪ್ರಮಾಣಪತ್ರ ಹೊಂದಿದವರಿಗೆ ಮಾತ್ರ ರಾಜ್ಯ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂದು ಬೊಮ್ಮಾಯಿ ಇದೇ ವೇಳೆ ತಿಳಿಸಿದರು.