ಹಾವೇರಿ: ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಸಂಬಂಧ ಒಂದು ಕೋಮಿನ ಯುವಕನ ಮೇಲೆ ಮತ್ತೊಂದು ಕೋಮಿನ ಯುವಕರು ಹಲ್ಲೆ ಮಾಡಿರುವ ಘಟನೆ ಹಿರೇಕೇರೂರು ಪಟ್ಟಣದಲ್ಲಿ ನಡೆದಿದೆ.
ಯುವಕನ ಮೇಲೆ ಹಲ್ಲೆ ಮಾಡಿ ಆತನನ್ನು ಹಿಡಿದುಕೊಂಡು ಹಿರೇಕೇರೂರು ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಜಗಳ ಬಿಡಿಸಲು ಬಂದ ಪೊಲೀಸ್ ಕಾನ್ಸ್ಟೇಬಲ್ ಅವರನ್ನು ಅನ್ಯಕೋಮಿನ ಯುವಕರ ಗುಂಪು ತಳ್ಳಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಪೊಲೀಸ್ ಕಾನ್ಸ್ಟೇಬಲ್ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ 15 ಯುವಕರ ಮೇಲೆ ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: 'ಹಿಜಾಬ್ ಕಾರಣಕ್ಕಾಗಿ ಹೆಣ್ಣು ಮಕ್ಕಳಿಗೆ ಶಾಲಾ ಪ್ರವೇಶ ನೀಡದಿರುವುದು ಅತ್ಯಂತ ಭೀಕರ':ಹಿಜಾಬ್ ವಿವಾದಕ್ಕೆ ಮಲಾಲಾ ಪ್ರತಿಕ್ರಿಯೆ
'ನಾವು ಕೇಸರಿ ಶಾಲು ಬಿಟ್ಟು ಬರುತ್ತೇವೆ, ಅವರು ಹಿಜಾಬ್ ಬಿಟ್ಟು ಬರಲಿ'
ಇನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿಕೊಂಡು ಬಂದು ಹಿಜಾಬ್ ವಿರುದ್ಧ ಪ್ರತಿಭಟಿಸಿದರು. ಇದೇ ವೇಳೆ, ತಾವು ಕೇಸರಿ ಶಾಲು ಬಿಟ್ಟು ಬರುತ್ತೇವೆ, ಅವರು ಕೂಡಾ ಹಿಜಾಬ್ ಬಿಟ್ಟು ಬರುವಂತೆ ಆಗ್ರಹಿಸಿದರು.