ಹಾವೇರಿ: ಕಳೆದ ತಿಂಗಳು ಗ್ರೇಟ್ ಬ್ರೀಟನ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಅಂಧರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶಿಗ್ಗಾಂವಿ ತಾಲೂಕಿನ ಶಿಶುವಿನಾಳ ಗ್ರಾಮದ ಯುವತಿ ಗಂಗವ್ವ ಅದ್ವಿತೀಯ ಸಾಧನೆ ಮಾಡಿದ್ದರು. ಭಾರತದ ಅಂಧರ ಮಹಿಳಾ ತಂಡದ ಭರವಸೆಯ ಆಟಗಾರ್ತಿಯಾಗಿರುವ ಗಂಗವ್ವ ಅಂಧತ್ವ ಸವಾಲಾಗಿ ಸ್ವೀಕರಿಸಿ ಗ್ರೇಟ್ ಬ್ರೀಟನ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ IBSA (ಇಬ್ಸಾ) world game 2023 ನಲ್ಲಿ ಮಿಂಚಿನ ಶತಕ ಗಳಿಸುವ ಮೂಲಕ ಭಾರತ ತಿರಂಗಾ ಎತ್ತಿ ಹಿಡಿದಿದ್ದರು. ಇಬ್ಸಾ ಅಂತಾರಾಷ್ಟ್ರೀಯ ವಲ್ಡ್ ಗೇಮ್‌ನಲ್ಲಿ ಭಾರತ, ಆಸ್ಟ್ರೇಲಿಯಾ, ಗ್ರೇಟ್ ಬ್ರೀಟನ್ ದೇಶಗಳು ಪಾಲ್ಗೊಂಡಿದ್ದವು. ಲೀಗ್ ಮ್ಯಾಚ್ನಲ್ಲಿ ಶತಕ ಸಿಡಿಸಿ ಟೀಂ ಇಂಡಿಯಾಕ್ಕೆ ಗಂಗವ್ವ ಜಯ ತಂದು ಕೊಟ್ಟಿದ್ದರು.
ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಜಯ ತಂದ ಅಂಧರ ಕ್ರಿಕೆಟ್ ಆಟಗಾರರು ಚಿನ್ನದ ಪದಕಗಳೊಂದಿಗೆ ಸ್ವದೇಶಕ್ಕೆ ಮರಳಿದ್ದಾರೆ. ಈ ಟೀಂನಲ್ಲಿ ಕರ್ನಾಟಕದ ಮೂವರು ಮಹಿಳಾ ಆಟಗಾರ್ತಿಯರಿರುವುದು ಹೆಮ್ಮೆಯ ವಿಷಯ. ಹಾವೇರಿ ಜಿಲ್ಲೆ ಗಂಗವ್ವ ಸೇರಿ ಚಿತ್ರದುರ್ಗದ ವರ್ಷಾ, ತುವಕೂರಿನ ದೀಪಿಕಾ ಟಿಸಿ ಕರ್ನಾಟಕದವರು. ಕ್ರಿಕೆಟ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ತಮಗೆ ರಾಜ್ಯ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ಧ ಇವರೆಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸಮರ್ಥನಂ ಸಂಸ್ಥೆಯಲ್ಲಿ ಕ್ರಿಕೆಟ್ ತರಬೇತಿ ಪಡೆದು ಬ್ರೆಡ್ ಇಂಡಿಯಾ ವೂಮೆನ್ ಕ್ರಿಕೆಟ್ ತಂಡದಲ್ಲಿ ವೈಸ್ ಕ್ಯಾಪ್ಟನ್ ಆಗಿ ಗಂಗವ್ವ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇಂತಹ ಆಟಗಾರ್ತಿ ಶಿಶುನಾಳ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಪರದಾಡುತ್ತಿದ್ದಾರೆ. ಗ್ರಾಮದ ಮಕ್ಕಳೊಂದಿಗೆ ರಸ್ತೆಯಲ್ಲೆ ಪ್ರತಿದಿನ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದಾರೆ.
ನಮ್ಮ ಕುಟುಂಬ ಕಷ್ಟದಲ್ಲಿ ಇದೆ, ತಂದೆ ಇಲ್ಲಾ. ತಾಯಿ ಒಬ್ಬಳೆ ಕಷ್ಟದಿಂದ ಓದಿಸಿದ್ದಾರೆ. ಮುಂದೆ ನಾನು ಇನ್ನೂ ಚನ್ನಾಗಿ ಬೆಳೆಯಬೇಕು ಕರ್ನಾಟಕ ಮತ್ತು ನಮ್ಮ ಜಿಲ್ಲೆಯ ಹೆಸರು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ನಮಗೆ ಪ್ರೋತ್ಸಾಹ ನೀಡಬೇಕು ಎಂದು ಗಂಗವ್ವ ಮನವಿ ಮಾಡಿದ್ದಾರೆ. ಅಂಧರ ಟೀಂನಲ್ಲಿದ್ದ ಬೇರೆ ರಾಜ್ಯಗಳ ಯುವತಿಯರಿಗೆ ಅಲ್ಲಿಯ ರಾಜ್ಯ ಸರ್ಕಾರಗಳು ಬಹುಮಾನ ಘೋಶಿಸಿವೆ. ಒಡಿಶಾ ಸರ್ಕಾರ ಮಹಿಳಾ ಅಂಧರ ಕ್ರಿಕೆಟ್‌ನಲ್ಲಿ ಭಾಗವಹಿಸಿದ್ದ ನಾಲ್ಕು ಆಟಗಾರ್ತಿಯರಿಗೆ ತಲಾ 20 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಿದ್ದಲದ್ದೆ ಸನ್ಮಾನ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ಪಿಚ್ನಲ್ಲಿ ಅಶ್ವಿನ್ ಉತ್ತಮ ಬೌಲರ್; ಅಕ್ಷರ್ ಸುವರ್ಣಾವಕಾಶ ಕಳೆದುಕೊಂಡರು- ಸಂದೀಪ್ ಪಾಟೀಲ್