ಹಾವೇರಿ : ಕಳೆದ ವಾರ ಪುಲ್ವಾಮದಲ್ಲಿ ನಡೆದ ಸರ್ಚ್ ಆಪರೇಷನ್ನಲ್ಲಿ ಗಾಯಗೊಂಡಿದ್ದ ಹಾವೇರಿ ಮೂಲದ ಯೋಧ ಶಿವಲಿಂಗೇಶ್ ವೀರಭದ್ರಪ್ಪ ಹುತಾತ್ಮರಾಗಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿಯ 28 ವರ್ಷದ ಶಿವಲಿಂಗೇಶ್ ವೀರಭದ್ರಪ್ಪ ಪಾಟೀಲ್ ಹುತಾತ್ಮನಾದ ಯೋಧ.
ಸೇನೆಯ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಯೋಧನನ್ನು ದೆಹಲಿಯ ಆರ್.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೀರಯೋಧನ ಮೃತದೇಹವನ್ನ ಸೋಮವಾರ ಸ್ವಗ್ರಾಮಕ್ಕೆ ತರಲಾಗುತ್ತಿದ್ದು, ಅಂದೇ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಗಳಿವೆ.