ಹಾವೇರಿ: ಕೊರೊನಾ ಹಿನ್ನೆಲೆ ಇಡೀ ದೇಶವೇ ಲಾಕ್ಡೌನ್ ಆಗಿದ್ದರೂ ಇನ್ನೂ ಕೆಲ ಪ್ರದೇಶಗಳು ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇದಕ್ಕೆ ನಿದರ್ಶನ ಹಾವೇರಿ ನಗರದಲ್ಲಿ ಜನ ಬೇಕಾಬಿಟ್ಟಿ ಓಡಾಡುತ್ತಿರುವುದು.
ನಗರದ ಹೊಸಮನಿ ಸಿದ್ದಪ್ಪ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಿಂತು ಪೊಲೀಸರು ಬೇಕಾಬಿಟ್ಟಿ ಓಡಾಡುವವರಿಗೆ ಐನೂರು ರುಪಾಯಿ ದಂಡ ಹಾಕ್ತಿದ್ದಾರೆ. ಲಾಕ್ಡೌನ್ ಬಳಿಕ ಈವರೆಗೆ ಪೊಲೀಸರು ಇಪ್ಪತ್ತೈದು ಲಕ್ಷಕ್ಕೂ ಅಧಿಕ ರೂಪಾಯಿ ದಂಡದ ಹಣವನ್ನ ವಸೂಲಿ ಮಾಡಿದ್ದಾರೆ. ಜೊತೆಗೆ ಪದೇ ಪದೆ ಓಡಾಡೋ ಒಂಬತ್ತು ನೂರಕ್ಕೂ ಅಧಿಕ ವಾಹನಗಳನ್ನ ಸೀಜ್ ಮಾಡಿದ್ದಾರೆ. ಆದರೂ ಕೆಲವರು ಬೇಕಾಬಿಟ್ಟಿ ಮನೆಬಿಟ್ಟು ಹೊರಗೆ ಓಡಾಡ್ತಿದ್ದಾರೆ.
ಇನ್ನೂ ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿಯುತ್ತಿರುವ ಪೊಲೀಸರು ಬೇಕಾಬಿಟ್ಟಿ ತಿರುಗುವವರಿಂದ ದಂಡ ವಸೂಲಿ ಮಾಡುವುದರ ಜೊತೆಗೆ. ಮನೆಯಲ್ಲೇ ಇರಿ, ಕೊರೊನಾ ಸೋಂಕು ಹರಡೋದನ್ನ ತಡೆಯಲು ಸಹಕರಿಸಿ ಅಂತಾ ತಿಳಿ ಹೇಳಿ ಕಳಿಸ್ತಿದ್ದಾರೆ.