ETV Bharat / state

ಪಡಿತರ ಪಡೆಯಲು ನೂಕುನುಗ್ಗಲು ; ಸಾಮಾಜಿಕ ಅಂತರ ಮರೆತ ಜನ - ಶಿಗ್ಗಾಂವಿ

ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಜನರು ಪಡಿತರ ಪಡೆಯಲು ಗುಂಪು ಗುಂಪಾಗಿ ಸೇರಿಕೊಂಡಿದ್ದು, ಸಾಮಾಜಿಕ ಅಂತರವನ್ನು ಕಾಪಾಡದೇ ಬೇಜವಬ್ದಾರಿ ವರ್ತನೆ ತೋರಿದ್ದಾರೆ.

Ration shop
ಪಡಿತರ ಪಡೆಯಲು ನೂಕುನುಗ್ಗಲು
author img

By

Published : Apr 6, 2020, 12:50 PM IST

ಹಾವೇರಿ: ಕೊರೊನಾ ಸೋಂಕು ತಡೆಗೆ ಲಾಕ್​ಡೌನ್​ ಇದ್ದರೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಗುಂಪು ಗುಂಪಾಗಿ ಪಡಿತರ ಪಡೆಯಲು ಸೇರಿರೋ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ.

ಪಡಿತರ ವಿತರಣಾ ಕೇಂದ್ರ ಬಳಿ ಜಮಾಯಿಸಿರುವ ಜನ

ಪಟ್ಟಣದ ನಾರಾಯಣಪುರದ ದೊಡ್ಡಪ್ರಮಾಣದ ವ್ಯವಸಾಯ ಸಹಕಾರಿ ಸಂಘದ ವಿತರಣಾ ಕೇಂದ್ರದ ಮುಂದೆ ಜನರು ಪಡಿತರ ಪಡೆಯಲು ಜಮಾಯಿಸಿದ್ದಾರೆ. ಪಡಿತರ ವಿತರಣಾ ಕೇಂದ್ರದ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಲಾಗಿದೆ. ಆದರೆ ಜನರು ಮಾತ್ರ ಗುಂಪು ಗುಂಪಾಗಿ ನಿಂತು ಪಡಿತರಕ್ಕಾಗಿ ಕಾಯುತ್ತಿದ್ದಾರೆ.

ಸಮಾಜಿಕ ಅಂತರ ಅನ್ನೋದನ್ನ ಪಡಿತರ ಪಡೆಯಲು ತಂದ ಚೀಲಗಳಿಗೆ ಮಾತ್ರ ಸೀಮಿತ ಮಾಡಿದ್ದಾರೆ. ಪಡಿತರ ಪಡೆಯಲು ತಂದ ಚೀಲಗಳನ್ನ ಸಾಮಾಜಿಕ ಅಂತರದಲ್ಲಿಟ್ಟು, ತಾವು ಮಾತ್ರ ಗುಂಪು ಗುಂಪಾಗಿ ಕುಳಿತು ಪಡಿತರಕ್ಕಾಗಿ ಕಾಯ್ತಿದ್ದಾರೆ.

ಪೊಲೀಸರು, ಕಂದಾಯ ಇಲಾಖೆ, ಪುರಸಭೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾ ಸಾಕಷ್ಟು ಅರಿವು ಮೂಡಿಸಿದ್ರೂ ಜನರು ಮಾತ್ರ ಅದು ತಮಗೆ ಸಂಬಂಧಿಸಿದ್ದೇ ಅಲ್ಲ ಅನ್ನುವಂತೆ ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.