ETV Bharat / state

ಹಾವೇರಿ ಜನರಿಗೆ ಪ್ರವಾಹ ಭೀತಿ: 251 ಲಕ್ಷ ರೂ. ಹಾನಿ ಸಂಭವಿಸಿದೆ ಎಂದ ಜಿಲ್ಲಾಡಳಿತ - ಹಾವೇರಿ ಇತ್ತೀಚಿನ ಸುದ್ದಿ

ವರದಾ ಪ್ರವಾಹದಿಂದ ಹಾವೇರಿಯ ಹಾನಗಲ್ ತಾಲೂಕಿನ ಹಲವು ಗ್ರಾಮಗಳ ಮನೆಗಳು ಜಲಾವೃತಗೊಂಡಿದೆ. 1348 ಹೆಕ್ಟೇರ್ ಪ್ರದೇಶಗಳ ತೋಟಗಾರಿಕಾ ಬೆಳೆಗೆ ಹಾನಿ ಸಂಭವಿಸಿದ್ದು ಅಂದಾಜು 251 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಹಾವೇರಿ ಜಿಲ್ಲಾಡಳಿತ ತಿಳಿಸಿದೆ.

haveri
ಹಾವೇರಿ ಜನರಿಗೆ ಪ್ರವಾಹ ಭೀತಿ
author img

By

Published : Jul 27, 2021, 7:38 AM IST

ಹಾವೇರಿ: ಜಿಲ್ಲೆಗೆ ಕಳೆದೆರಡು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದಾನೆ. ಆದರೆ, ತುಂಗಭದ್ರಾ, ವರದಾ, ಧರ್ಮಾ, ಕುಮುಧ್ವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ನದಿಗಳ ತಟದಲ್ಲಿರುವ ಹಲವು ಗ್ರಾಮಗಳಲ್ಲಿ ಪ್ರವಾಹದ ಭೀತಿ ಆವರಿಸಿದೆ. ಅದರಲ್ಲೂ ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲೂಕುಗಳಲ್ಲಿ ಕುಮುಧ್ವತಿ ನದಿಯಿಂದಾಗಿ ನೂರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದೆ.

ವರದಾ ಪ್ರವಾಹದಿಂದ ಹಾವೇರಿಯ ಹಾನಗಲ್ ತಾಲೂಕಿನ ಹಲವು ಗ್ರಾಮಗಳ ಮನೆಗಳು ಜಲಾವೃತಗೊಂಡಿದೆ. 1348 ಹೆಕ್ಟೇರ್ ಪ್ರದೇಶಗಳ ತೋಟಗಾರಿಕಾ ಬೆಳೆಗೆ ಹಾನಿ ಸಂಭವಿಸಿದ್ದು ಅಂದಾಜು 251 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ಎನ್‌ಡಿಆರ್​ ಎಫ್‌ನಿಂದ 195 ಲಕ್ಷ ರೂಪಾಯಿ ಅನುದಾನ ಬೇಕಿದೆ. ಇನ್ನು ಇತರ ಬೆಳೆಗಳು ಜಲಾವೃತಗೊಂಡಿದ್ದು 855 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಹಾವೇರಿ ಜನರಿಗೆ ಪ್ರವಾಹ ಭೀತಿ

ಜಿಲ್ಲೆಯಲ್ಲಿ ಸೋಮವಾರ 143 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು,10ಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ಇನ್ನು 15ಕ್ಕೂ ಅಧಿಕ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಸುಮಾರು 25ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, ನಿರಾಶ್ರಿತರು ಕಾಳಜಿ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ. ಜಿಲ್ಲಾಡಳಿತ ಸಂತ್ರಸ್ತರ ನೆರವಿಗೆ ಮುಂದಾಗಿದ್ದು ಗ್ರಾಮಗಳಲ್ಲಿ ಡಂಗೂರ ಬಾರಿಸಿ ಜಾಗೃತಿ ಮೂಡಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.