ಹಾನಗಲ್(ಹಾವೇರಿ) : ಕೊರೊನಾ ಸೋಂಕಿಗೆ ಅಕ್ಷರಶಃ ತತ್ತರಿಸಿರುವ ದೇವರನಾಡು ಕೇರಳದಲ್ಲಿ ಹಾನಗಲ್ ತಾಲೂಕಿನ ಅಕ್ಕಿಆಲೂರ ಗ್ರಾಮದ ಯುವ ವೈದ್ಯ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಮದ ಡಾ.ಶಿವರಾಜ ಉಪ್ಪಿನ ಇವರು ಕೆಲ ವರ್ಷಗಳ ಹಿಂದಷ್ಟೇ ಎಂಬಿಬಿಎಸ್ ಮುಗಿಸಿದ್ದರು. ಸದ್ಯ ಕೇರಳದ ಪ್ರತಿಷ್ಟಿತ ಕಣ್ಣೂರಿನ ಅಸ್ಟರ ವಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದಾರೆ.
15 ದಿನಗಳಿಂದ ಚಿಕಿತ್ಸೆ ನೀಡುತ್ತಿರುವ ಡಾ.ಶಿವರಾಜ ಉಪ್ಪಿನ, ಹಗಲಿನ ಸಮಯದಲ್ಲಿ 10ಘಂಟೆ ಸೇವೆ, ರಾತ್ರಿಯ ಸಮಯದಲ್ಲಿ 14 ಘಂಟೆಗಳ ಸೇವೆ ಸಲ್ಲಿಸುತ್ತಿದ್ದಾರೆ. ಚಿಕಿತ್ಸೆ ನೀಡುವ ತಂಡದಲ್ಲಿ 10 ಜನ ವೈದ್ಯರು, 30 ಜನ ದಾದಿಯರು ಚಿಕಿತ್ಸೆ ನೀಡುವುದರ ಜೊತೆಗೆ ಮನೋಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ.