ETV Bharat / state

ಬೈಕ್​ ಅಪಘಾತ: ಮೂರೂವರೆ ವರ್ಷದ ಮಗು ಸ್ಥಳದಲ್ಲೇ ಸಾವು - ಹಾವೇರಿ ಬೈಕ್​ ಅಪಘಾತ

ಹಾವೇರಿ ಹೊರವಲಯದ ಬೈಪಾಸ್ ಬಳಿ ರಸ್ತೆ ಪಕ್ಕದ ಸಿಮೆಂಟ್ ಕಟ್ಟೆಗೆ ಬೈಕ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಮೂರೂವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

Bike accident
ಮಗು ಸಾವು
author img

By

Published : Feb 16, 2021, 10:49 PM IST

ಹಾವೇರಿ: ರಸ್ತೆ ಪಕ್ಕದ ಸಿಮೆಂಟ್ ಕಟ್ಟೆಗೆ ಬೈಕ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಮೂರೂವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಬೈಕ್​ ಅಪಘಾತ

ಹಾವೇರಿ ಹೊರವಲಯದ ಬೈಪಾಸ್ ಬಳಿ ಈ ದುರ್ಘಟನೆ ನಡೆದಿದ್ದು ಬೈಕ್​ನಲ್ಲಿದ್ದ ಮೂರೂವರೆ ವರ್ಷದ ಮಗು ನಯನಾ ನಾಯಕ ಸ್ಥಳದಲ್ಲಿ ಸಾವನ್ನಪ್ಪಿದೆ. ಬೈಕ್​ನಲ್ಲಿ ಅಣ್ಣಪ್ಪ ಲಮಾಣಿ ತನ್ನ ತಂಗಿ ಮತ್ತು ಅವಳ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.

ಘಟನೆಯಲ್ಲಿ 21 ವರ್ಷದ ಯಶೋಧಾ, 25 ವರ್ಷದ ಬೈಕ್ ಸವಾರ ಅಣ್ಣಪ್ಪ ಲಮಾಣಿಗೆ ಮತ್ತು ನಯನಾಳ ಸಹೋದರ ಸಾಯಿರಾಮ್​ಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಗ್ಗಾವಿಯಿಂದ ಮೋಟೆಬೆನ್ನೂರು ಕಡೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.