ETV Bharat / state

ಗುರುಪೂರ್ಣಿಮೆ: ಮೂವರು ಮಠಾಧೀಶರಿಂದ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀಗಳ ಪಾದಪೂಜೆ - ಮೂರು ಸಾವಿರ ಮಠದ ಗುರುಸಿದ್ದರಾಜಯೋಗೇಂದ್ರ ಶ್ರೀಗಳ

ಗುರುಪೂರ್ಣಿಮೆಯ ಅಂಗವಾಗಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೇಂದ್ರ ಶ್ರೀಗಳಿಗೆ ಮೂವರು ಮಠಾಧೀಶರು ಗುರುಪೂಜೆ ಮಾಡಿದರು.

ಗುರುಪೂರ್ಣಿಮೆಗೆ ಶ್ರೀಗಳ ಪಾದಪೂಜೆ
ಗುರುಪೂರ್ಣಿಮೆಗೆ ಶ್ರೀಗಳ ಪಾದಪೂಜೆ
author img

By

Published : Jul 4, 2023, 9:28 AM IST

Updated : Jul 4, 2023, 12:35 PM IST

ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀಗಳ ಪಾದಪೂಜೆ

ಹಾವೇರಿ: ಜಿಲ್ಲೆಯ ಹುಕ್ಕೇರಿಮಠದಲ್ಲಿ ಗುರುಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಶ್ರೀ, ಅಕ್ಕಿಆಲೂರು ವಿರಕ್ತಮಠದ ಶಿವಬಸವ ಶ್ರೀ ಮತ್ತು ಕೂಡಲದ ಗುರುಮಹೇಶ್ವರ ಶ್ರೀಗಳು ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೇಂದ್ರ ಶ್ರೀಗಳ ಪಾದಪೂಜೆ ನೆರವೇರಿಸಿದರು. ವೀರಶೈವ ಪರಂಪರೆಯಂತೆ ಮೂಜಗು ಅವರ ಪಾದತೊಳೆದು ಪಾದೋದಕ ಸ್ವೀಕರಿಸಿ ಬಿಲ್ವಹಾರ, ಪುಷ್ಪಹಾರ ಹಾಕಿದರು.

ಇದೇ ವೇಳೆ, ಹಾವೇರಿ ಹುಕ್ಕೇರಿ ಮಠದ ಶ್ರೀಗಳು ಕಳೆದೊಂದು ತಿಂಗಳಿಂದ ಕೈಗೊಂಡಿದ್ದ ಮೌನ ಅನುಷ್ಠಾನಕ್ಕೆ ಮಂಗಳ ಹಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೂಜಗು ಶ್ರೀಗಳು, "ಲೌಕಿಕ ವ್ಯವಹಾರವನ್ನು ಹಿಡಿದು ವೀರಶೈವ ಧರ್ಮ ಮುಕ್ತಿಯಡೆಗೆ ಧಾವಿಸುವುದು ವೀರಶೈವ ಲಿಂಗಾಯತ ಧರ್ಮದ ಪರಂಪರೆ" ಎಂದರು.

ಮುಂದುವರೆದು, "ವಿಜ್ಞಾನಿಗಳು ಇಂದಿಗೂ ಸಹ ಬ್ರಹ್ಮಾಂಡದ ಅಳತೆ ಮಾಡಿಲ್ಲ. ಆಕಾಶದಲ್ಲಿರುವ ಗ್ಯಾಲಕ್ಸಿಗಳನ್ನು ಅಳತೆ ಮಾಡಲು ಸಾಧ್ಯವಾಗಿಲ್ಲ. ಕಣ್ಣಿಗೆ ಕಾಣದ ಗ್ಯಾಲಕ್ಸಿಗಳಿವೆ, ಕಣ್ಣಿಗೆ ಕಾಣುವ ಗ್ಯಾಲಕ್ಸಿಗಳು ಇವೆ. ಇವುಗಳನ್ನು ತಮ್ಮ ಉಪಕರಣಗಳಿಂದ ಅಳತೆ ಮಾಡಲು ವಿಜ್ಞಾನಿಗಳಿಗೆ ಆಗಿಲ್ಲ" ಎಂದು ಹೇಳಿದರು.

"ಆಕಾಶದ ಬಯಲನ್ನು ಅಳತೆ ಮಾಡಿದ ಯಾವ ವಿಜ್ಞಾನಿಯೂ ಹಿಂದೆ ಇಲ್ಲ, ಮುಂದೆಯೂ ಕೂಡಾ ಇರುವುದಿಲ್ಲ. ಚಂದ್ರ ತಂಪಿರುವ ಕಾರಣ ಚಂದ್ರನ ಬಳಿ ಮಾನವ ಹೋಗಿದ್ದಾನೆ. ಆದರೆ ಸೂರ್ಯನ ಹತ್ತಿರ ಯಾವ ವಿಜ್ಞಾನಿಗಳು ಧಾವಿಸಿಲ್ಲ. ಇದುವರೆಗೆ ಸಂಪೂರ್ಣವಾಗಿ ಚಂದ್ರನ ಅಧ್ಯಯನ ಮಾಡಿದ ವಿಜ್ಞಾನಿಯೇ ಇಲ್ಲ. ಒಂದೊಂದು ನಕ್ಷತ್ರವನ್ನು ಅಧ್ಯಯನ ಮಾಡಬೇಕಾದರೆ ಕೋಟ್ಯಂತರ ವರ್ಷಗಳೇ ಬೇಕು ಎಂದ ಮೂಜಗುರು, ಆಕಾಶದಲ್ಲಿ ಕಾಣುವ ಎಲ್ಲವನ್ನೂ ಬ್ರಹ್ಮಾಂಡ ಎಂದು ಕರೆಯುತ್ತಾರೆ" ಎಂದರು.

"ಈ ಬ್ರಹ್ಮಾಂಡದತ್ತ ಶ್ರೀಮುಕುಟವಿದ್ದು, ಭಗವಂತನ ತಲೆ ಬ್ರಹ್ಮಾಂಡವನ್ನೂ ದಾಟಿ ಇದೆ. ಆತನ ಪಾದ ಪಾತಾಳದತ್ತ ಇದೆ ಎಂದು 12ನೇ ಶತಮಾನದಲ್ಲಿ ಬಸವಣ್ಣನವರೇ ಹೇಳಿದ್ದಾರೆ. ಈ ಹೋಲಿಕೆಯ ಮೇಲೆ ದೇವರು ಎಷ್ಟು ಅಪ್ರತಿಮನಾಗಿದ್ದಾನೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು. 14 ಲೋಕಗಳಲ್ಲಿ ಪಾತಾಳವೂ ಒಂದು ಲೋಕ. ನಾವು ಭೂಲೋಕ ಬಿಟ್ಟರೆ ಯಾವ ಲೋಕವನ್ನೂ ನೋಡಿಲ್ಲ" ಎಂದು ಶ್ರೀಗಳು ವಿವರಿಸಿದರು.

ಪಾತಾಳವನ್ನು ಇಲ್ಲಿಯವರೆಗೆ ಯಾರೂ ನೋಡಿಲ್ಲ. ಅದರಂತೆ ಇನ್ನೂ 13 ಲೋಕಗಳಿವೆ. ಅದಕ್ಕಾಗಿಯೇ ಬಸವಣ್ಣನವರು ಭಗವಂತನನ್ನು ಅಗಮ್ಯ, ಅಗೋಚರ, ಅಪ್ರಮಾಣ, ಅಪ್ರಮೇಯ ಎಂದು ಬಣ್ಣಿಸಿದ್ದಾರೆ ಎಂದರು. 'ನಿನ್ನಂತ ಗುರು ಯಾರು ಗುರುವೇ' ಎಂಬ ಗುರು ಕುಮಾರ್ ಗೀತೆಯನ್ನು ಶ್ರೀಗಳು ಬಿಡುಗಡೆ ಮಾಡಿದರು.

ಇದನ್ನೂ ಓದಿ: ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್​​​ನಿಂದ ಗುರುಪೂರ್ಣಿಮೆ: ಕಣ್ಮನ ಸೆಳೆದ ವಿಶೇಷ ಅಲಂಕಾರ

Last Updated : Jul 4, 2023, 12:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.