ರಾಣೆಬೆನ್ನೂರು : ಕ್ಷೇತ್ರದ ನೂತನ ಶಾಸಕ ಅರುಣಕುಮಾರ ಪೂಜಾರಗೆ ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ನೂತನ ಕಚೇರಿ ಸಿದ್ಧವಾಗುತ್ತಿದೆ.
ಶಾಸಕರು ನಿರಂತರವಾಗಿ ಜನರ ಸಂಪರ್ಕದಲ್ಲಿರಲೆಂದು ಕಾರ್ಯಾಲಯವನ್ನು ತಾಲೂಕು ಪಂಚಾಯತಿ ಅನುದಾನ ಅಡಿಯಲ್ಲಿ ಹೈಟೆಕ್ ಆಗಿ ಸಿದ್ದಪಡಿಸಲಾಗುತ್ತಿದೆ.
ಈ ಹಿಂದೆ ಕೆಪಿಜೆಪಿ ಪಕ್ಷದ ಆರ್. ಶಕರ್ ಶಾಸಕರಾಗಿದ್ದ ಸಮಯದಲ್ಲಿ ತಾಲೂಕು ಪಂಚಾಯತ್ನಲ್ಲಿ ಶಾಸಕರಿಗೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು, ಆದರೆ ಬಿಜೆಪಿ ಶಾಸಕ ಅರುಣ್ ಕುಮಾರ ಅನರ್ಹ ಶಾಸಕ ಆರ್. ಶಂಕರ ಬಳಕೆ ಮಾಡಿದ ಕಾರ್ಯಾಲಯವನ್ನು ತಿರಸ್ಕರಿಸಿ ಪ್ರತ್ಯೇಕ ಕೊಠಡಿ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.