ETV Bharat / state

ಇಂಗ್ಲೆಂಡಿನಿಂದ ಜಿಲ್ಲೆಗೆ ಬಂದವರ ಮೇಲೆ ನಿಗಾ : ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ - ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ

ಬೆಂಗಳೂರಿನಲ್ಲಿರುವ ಹಾವೇರಿ ಮೂಲದ ಒಬ್ಬರ ಮೇಲೆ ಅಲ್ಲಿನ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಐವರು ಅಮೆರಿಕಾ ಸೇರಿ ಬೇರೆ ಬೇರೆ ಕಡೆಗಳಿಂದ ಇಂಗ್ಲೆಂಡ್​ ಮಾರ್ಗವಾಗಿ ಬಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು..

ಹಾವೇರಿ ಜಿಲ್ಲಾ ಆಸ್ಪತ್ರೆ
Haveri district hospital
author img

By

Published : Dec 26, 2020, 6:41 AM IST

ಹಾವೇರಿ : ಜಿಲ್ಲೆಗೆ ಇಂಗ್ಲೆಂಡ್​ನಿಂದ ಐವರು ಆಗಮಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದರು. ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಗೆ ಇಂಗ್ಲೆಂಡಿನಿಂದ ಐವರು ಬಂದಿದ್ದಾರೆ. ಅದರಲ್ಲಿ ಶಿಗ್ಗಾಂವಿ ತಾಲೂಕಿನ ಇಬ್ಬರು, ಹಾವೇರಿ ಮತ್ತು ರಾಣೆಬೆನ್ನೂರಿನ ತಾಲೂಕಿನ ಒಬ್ಬರು, ಬೆಂಗಳೂರಿನಲ್ಲಿರುವ ಹಾವೇರಿ ಮೂಲದ ಒಬ್ಬರು ಎಂದು ತಿಳಿದು ಬಂದಿದೆ.

ಜಿಲ್ಲೆಗೆ ಬಂದಿರುವ ನಾಲ್ವರಿಗೆ ಕೋವಿಡ್​ ಪರೀಕ್ಷೆ ನಡೆಸಲಾಗಿದೆ. ಇವರೆಲ್ಲರ ವರದಿ ನೆಗೆಟಿವ್​ ಬಂದಿದೆ. ಇವರ ಸಂಪರ್ಕದಲ್ಲಿದ್ದರ 11 ಜನರ ವರದಿಯೂ ನೆಗೆಟಿವ್​ ಬಂದಿದೆ. ಆದರೂ ಮುನ್ನೆಚ್ಚರಿಕೆಯಿಂದ 28 ದಿನಗಳ ಕಾಲ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿರುವ ಹಾವೇರಿ ಮೂಲದ ಒಬ್ಬರ ಮೇಲೆ ಅಲ್ಲಿನ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಐವರು ಅಮೆರಿಕಾ ಸೇರಿ ಬೇರೆ ಬೇರೆ ಕಡೆಗಳಿಂದ ಇಂಗ್ಲೆಂಡ್​ ಮಾರ್ಗವಾಗಿ ಬಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.