ರಾಣೆಬೆನ್ನೂರು(ಹಾವೇರಿ): ಅಧಿವೇಶನ ಮುಗಿದ ಬಳಿಕ ತಜ್ಞರು ಹಾಗೂ ಮುಖ್ಯಮಂತ್ರಿಗಳ ಜತೆ ಚರ್ಚಿಸಿ 1 ರಿಂದ 5ನೇ ತರಗತಿಗಳ ಪುನಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಮಾತನಾಡಿದ ಅವರು, ಸದ್ಯ ಅಧಿವೇಶನ ನಡೆಯುತ್ತಿದೆ. ಶಾಲಾ ಪುನಾರಂಭದ ಬಗ್ಗೆ ಸದನದಲ್ಲಿ ಎಲ್ಲಾ ಸಚಿವರ ಹಾಗೂ ಅಧಿಕಾರಿಗಳ ಅಭಿಪ್ರಾಯ ಪಡೆಯಲಾಗುವುದು. ಅಧಿವೇಶನ ಮುಗಿದ ತಕ್ಷಣ ತಾಂತ್ರಿಕ ತಜ್ಞರ ಜತೆ ಸಭೆ ನಡೆಸಿ ಸಲಹೆ ಪಡೆಯಲಾಗುವುದು. ಬಳಿಕ, ಪೂರ್ಣ ಪ್ರಮಾಣದಲ್ಲಿ ಶಾಲೆಗಳ ಆರಂಭದ ಬಗ್ಗೆ ನಿರ್ಧರಿಸುತ್ತೇವೆ ಎಂದರು.
ಇದನ್ನೂ ಓದಿ: ವೃತ್ತಿಪರ ಕೋರ್ಸ್ಗೆ ನಡೆದಿದ್ದ CET ಪರೀಕ್ಷೆ.. ನಾಳೆಯೇ ಫಲಿತಾಂಶ ಪ್ರಕಟ
ರಾಜ್ಯದಲ್ಲಿ ಶಾಲೆ ಪುನಾರಂಭ ಮಾಡಬಾರದು ಅನ್ನುವ ಉದ್ದೇಶ ನಮ್ಮಗಿಲ್ಲ. ಸರ್ಕಾರ ಹಾಗೂ ತಜ್ಞರು ನಾಳೆ ಶಾಲೆ ಪುನಾರಂಭ ಮಾಡಿ ಎಂದು ತಿಳಿಸಿದರೆ ಶಿಕ್ಷಣ ಇಲಾಖೆ, ನಮ್ಮ ಶಿಕ್ಷಕರು ಶಾಲೆ ಆರಂಭಕ್ಕೆ ಸಿದ್ಧವಾಗಿದ್ದಾರೆ. ಕೋವಿಡ್ ಇರುವ ಹಿನ್ನೆಲೆ ಒಂದರಿಂದ ಮೂರನೇ ತರಗತಿ ಮಕ್ಕಳ ಬಗ್ಗೆ ನಮಗೆ ಭಯವಿದೆ ಎಂದು ಸಚಿವರು ಹೇಳಿದ್ರು.