ETV Bharat / state

ನರೇಗಾ ಮೂಲಕ ರೈತನಿಂದ ಮಿಶ್ರ ಬೆಳೆ: ಲಕ್ಷಗಟ್ಟಲೆ ಆದಾಯ ಗಳಿಸಿ ಮಾದರಿ ಕೃಷಿ - farmer earning lakhs ranebennuru

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಭೀಮಪ್ಪ ಹನುಮಂತಪ್ಪ ಅಸುಂಡಿ ಎಂಬ ರೈತ ನರೇಗಾ ಯೋಜನೆ ಬಳಸಿಕೊಂಡು ಮಿಶ್ರ ಬೆಳೆ ಬೆಳೆಯುವ ಮೂಲಕ ಲಕ್ಷ ಆದಾಯ ಗಳಿಸುತ್ತಿದ್ದು, ಇಡೀ ಗ್ರಾಮಕ್ಕೆ ಮಾದರಿಯಾಗಿದ್ದಾರೆ.

ranebennuru
ಮಿಶ್ರ ಬೆಳೆ ಮೂಲಕ ಲಕ್ಷ ಸಂಪಾದಿಸುತ್ತಿರುವ ರೈತ
author img

By

Published : Dec 15, 2020, 12:56 PM IST

ರಾಣೆಬೆನ್ನೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಗ್ರಾಮೀಣ ಖಾತ್ರಿ ಯೋಜನೆ ಬಳಸಿಕೊಂಡು ರೈತ ಮಿಶ್ರ ಬೆಳೆ ಬೆಳೆಯುವ ಮೂಲಕ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.

ಮಿಶ್ರ ಬೆಳೆ ಮೂಲಕ ಲಕ್ಷ ಸಂಪಾದಿಸುತ್ತಿರುವ ರೈತ ಭೀಮಪ್ಪ ಹನುಮಂತಪ್ಪ ಅಸುಂಡಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಭೀಮಪ್ಪ ಹನುಮಂತಪ್ಪ ಅಸುಂಡಿ ಎಂಬ ರೈತ ಇಂತಹ ಒಂದು ವಿನೂತನ ಕೃಷಿ ಮೂಲಕ ಇಡೀ ಗ್ರಾಮಕ್ಕೆ ಮಾದರಿಯಾಗಿದ್ದಾರೆ. ಕಾಕೋಳ ಗ್ರಾಮ ಪಂಚಾಯತ್ ಒಳಗೆ ಸರ್ಕಾರ ನರೇಗಾ ಯೋಜನೆಯಲ್ಲಿ ಮಿಶ್ರ ಬೆಳೆ ಬೆಳೆಯುವುದಕ್ಕೆ ಸಹಾಯಧನ ನೀಡಿದೆ. ಇದನ್ನೇ ಬಳಸಿಕೊಂಡು ರೈತ ಭೀಮಪ್ಪ ತನ್ನ ಸ್ವಂತ ಎರಡೂವರೆ ಎಕರೆ ಭೂಮಿಯಲ್ಲಿ ಪಪ್ಪಾಯಿ, ಶೇಂಗಾ ಮತ್ತು ಕ್ಯಾಬೇಜ್ ಮಿಶ್ರ ಬೆಳೆ ಬೆಳೆದಿದ್ದಾರೆ.

ಕಾಕೋಳ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಿಂದ ಸಹಾಯಧನ ಪಡೆದ ಭೀಮಪ್ಪ ಪಪ್ಪಾಯಿ ಬೆಳೆಗೆ ಹನಿ ನೀರಾವರಿ ಯೋಜನೆ ಅಳವಡಿಸಿಕೊಂಡಿದ್ದಾರೆ. ಅಲ್ಲದೆ ಮಿಶ್ರ ಬೆಳೆ ಉತ್ತಮವಾಗಿ ಬಂದಿದೆ. ಇದರಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಿದ್ದಾರೆ.

ಓದಿ: ಯೋಗೀಶ್​ ಗೌಡ ಹತ್ಯೆ ಪ್ರಕರಣ: ಮುಂದುವರೆದ ಸಿಬಿಐ ತನಿಖೆ

ಈ ಕುರಿತು ಮಾತನಾಡಿದ ರೈತ ಭೀಮಪ್ಪ, ಜಮೀನಿನಲ್ಲಿ ನರೇಗಾ ಯೋಜನೆ ಅನುಷ್ಠಾನದಿಂದ ಉತ್ತಮ ಬೆಳೆ ಬರಲು ಸಾಧ್ಯವಾಗಿದೆ. ಸದ್ಯ ಮಿಶ್ರ ಬೆಳೆ‌ ಮೂಲಕ ಏಳು ಲಕ್ಷ ಆದಾಯ ಬರುತ್ತಿದೆ. ನರೇಗಾ ಯೋಜನೆಯಿಂದ ಜೀವನದ ಆರ್ಥಿಕ ಗುಣಮಟ್ಟ ಉತ್ತಮವಾಗಿದೆ. ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ಯೋಜನೆ ಅನುಷ್ಠಾನ ಮಾಡಿಕೊಂಡು ಮಿಶ್ರ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಮನವಿ‌ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.