ETV Bharat / state

ಹಾನಗಲ್: ಸೂಕ್ತ ಬೆಲೆ ಸಿಗದೆ ಮೆಣಸಿನ ಬೆಳೆ ನಾಶ ಮಾಡಿದ ರೈತ

ಲಾಕ್​ಡೌನ್​​ನಿಂದಾಗಿ ಮೆಣಸಿಗೆ ಸೂಕ್ತ ಬೆಲೆ ಸಿಗದೆ ಹಾನಗಲ್ ಕೂಡಲ ಗ್ರಾಮದ ರೈತನೊಬ್ಬ ತನ್ನ ಸ್ವಂತ ಎರಡು ಎಕರೆ ಜಮೀನಿನಲ್ಲಿ ಹಾಕಿದ್ದ ಮೆಣಸಿನ ಗಿಡಗಳನ್ನು ಸಂಪೂರ್ಣ ನಾಶ ಮಾಡಿದ್ದಾನೆ.

Hanagal
ಮೆಣಸಿನ‌ ಗಿಡಗಳನ್ನು ನಾಶ ಮಾಡಿದ ರೈತ
author img

By

Published : May 3, 2020, 4:39 PM IST

ಹಾನಗಲ್: ಲಾಕ್​​ಡೌನ್ ಹಿನ್ನೆಲೆ, ಸೂಕ್ತ ಬೆಲೆ ಸಿಗದ ಕಾರಣದಿಂದ ಬೆಳೆದು ನಿಂತ ಮೆಣಸಿನ‌ ಗಿಡಗಳನ್ನು ರೈತ ಟ್ರ್ಯಾಕ್ಟರ್​​ನಿಂದ ನಾಶ ಪಡಿಸಿದ್ದಾರೆ.

ತಾಲೂಕಿನ ಕೂಡಲ ಗ್ರಾಮದ ಮಹಾಬಲೇಶ್ವರಪ್ಪ ಮಾವಿನಮರದ ಎಂಬ ರೈತ ತನ್ನ ಸ್ವಂತ ಎರಡು ಎಕರೆ ಜಮೀನಿನಲ್ಲಿ ಹಾಕಿದ್ದ ಮೆಣಸಿನ ಗಿಡಗಳನ್ನು ಸಂಪೂರ್ಣ ನಾಶ ಮಾಡಿದ್ದಾನೆ. ಅಂದಾಜು 50 ರಿಂದ 80 ಸಾವಿರ ಖರ್ಚು ಮಾಡಿ ಬೆಳೆದಿದ್ದ ಬೆಳೆ ಇದೀಗ ಸೂಕ್ತ ಬೆಲೆ ಸಿಗದೆ ನಷ್ಟದಲ್ಲಿದೆ. ಸಾಲ ಮಾಡಿ ಮೆಣಸಿನ ಗಿಡಗಳನ್ನು ಬೆಳೆದಿದ್ದು, ಇದೀಗ ಸೂಕ್ತ ಸಮಯಕ್ಕೆ ಮಾರ್ಕೆಟ್ ವ್ಯವಸ್ಥೆ ಮತ್ತು ಬೆಲೆ ಸಿಗದ ಕಾರಣ ಮೆಣಸಿನ ಕಾಯಿಗಳು ಗಿಡದಲ್ಲಿಯೇ ಕೊಳೆಯುತ್ತಿವೆ ಎಂದು ರೈತ ತಮ್ಮ ಅಳಲು ಹಂಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.