ETV Bharat / state

ಕೊರೊನಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ: ವೈದ್ಯನ ಮೇಲೆ ಬಿತ್ತು ಕೇಸ್

ಸಿಂದಗಿ ಶಾಂತ ವೀರೇಶ್ವರ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ವೈದ್ಯ ಡಾ.ಶರಣು ಅಂಗಡಿ, ದುಬೈನಿಂದ ಬಂದಿದ್ದ ಹಾವೇರಿ ಜಿಲ್ಲೆಯ ವ್ಯಕ್ತಿಯಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ ಎಂದು ಸುದ್ದಿ ಹರಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಹಾಗು ಪೊಲೀಸರು ಆರೋಪಿ ವೈದ್ಯನನ್ನು ನಿಚಾರಣೆಗೆ ಒಳಪಡಿಸಿದ್ದರು.

Fake news on Corona on social network
ವೈದ್ಯ ಡಾ.ಶರಣು ಅಂಗಡಿ ಪ್ರಕರಣ ದಾಖಲು ವಿರುದ್ಧ
author img

By

Published : Mar 15, 2020, 12:44 PM IST

ಹಾವೇರಿ: ಕೊರೊನಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಕ್ಕೆ ದೂರವಾದ ಸುದ್ದಿ ಹರಿಬಿಟ್ಟಿದ್ದ ಹಾವೇರಿ ನಗರದ ವೈದ್ಯನ ವಿರುದ್ಧ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟಿದ್ದ ವೈದ್ಯನ ವಿರುದ್ಧ ಪೊಲೀಸರು ಕೇಸ್ ಹಾಕಿದ್ದಾರೆ.

ಸಿಂದಗಿ ಶಾಂತ ವೀರೇಶ್ವರ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ವೈದ್ಯ ಡಾ.ಶರಣು ಅಂಗಡಿ, ದುಬೈನಿಂದ ಬಂದಿದ್ದ ಹಾವೇರಿ ಜಿಲ್ಲೆಯ ವ್ಯಕ್ತಿಯಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ ಎಂದು ಸುದ್ದಿ ಹರಿಬಿಟ್ಟಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವ್ಯಾಪಕವಾಗಿ ಹರಡ್ತಿರೋದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಶಾಸಕ ನೆಹರು ಓಲೇಕಾರ ಗಮನಿಸಿದ್ದಾರೆ. ಈ ಕುರಿತಾಗಿ ವೈದ್ಯ ಡಾ.ಅಂಗಡಿಯವರನ್ನು ನಿನ್ನೆ ಪ್ರವಾಸಿ ಮಂದಿರಕ್ಕೆ ಕರೆಯಿಸಿ ಶಾಸಕರು ಮತ್ತು ಪೊಲೀಸರು ವಿಚಾರಣೆ ನಡೆಸಿದ್ದರು.

ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ.ಜಗದೀಶ ಪಾಟೀಲ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಆರೋಪಿ ವೈದ್ಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಪ್ರಕರಣ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.