ETV Bharat / state

ತಪ್ಪಿಸಿಕೊಂಡಿದ್ದ ಸೋಂಕಿತ ಯುವಕ ರಾಣೆಬೆನ್ನೂರಲ್ಲಿ ಪತ್ತೆ: ಕೋವಿಡ್​ ಆಸ್ಪತ್ರೆಗೆ ರವಾನೆ! - ರಾಣೆಬೆನ್ನೂರು ಸುದ್ದಿ

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಪರ್ವತ ಸಿದ್ದಗೇರಿ ಗ್ರಾಮದಿಂದ ತಪ್ಪಿಸಿಕೊಂಡಿದ್ದ ಸೋಂಕಿತ ಯುವಕನನ್ನು ರಾಣೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆತನನ್ನು ಹಾವೇರಿ ಜಿಲ್ಲಾಸ್ಪತ್ರೆಯ ಕೋವಿಡ್ ವಿಭಾಗಕ್ಕೆ ರವಾನಿಸಲಾಗಿದೆ.

corona
ಕೊರೊನಾ
author img

By

Published : Jul 6, 2020, 9:53 PM IST

ರಾಣೆಬೆನ್ನೂರು: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಪರ್ವತ ಸಿದ್ದಗೇರಿ ಗ್ರಾಮದ ಕೊರೊನಾ ಸೋಂಕಿತ ಯುವಕನನ್ನು ರಾಣೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ವ್ಯಕ್ತಿಯೊಬ್ಬನಿಗೆ ಎರಡು ದಿನದ ಹಿಂದೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಈ ಸಮಯದಲ್ಲಿ ರಟ್ಟಿಹಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯರು ಕರೆ ಮಾಡಿ, ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದಿದ್ದಾರೆ. ಆಗ ಆತ ತನ್ನ ಮೊಬೈಲ್ ಜಜ್ಜಿ ಯಾರಿಗೂ ಸುಳಿವು ಸಿಗಬಾರದೆಂದು ಗ್ರಾಮದಿಂದ ಪರಾರಿಯಾಗಿದ್ದ. ಈ ಕುರಿತು ವೈದ್ಯಾಧಿಕಾರಿಗಳು ರಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಸೋಂಕಿತನನ್ನು ಹುಡುಕಲು ಮುಂದಾಗಿದ್ದಾರೆ. ಯುವಕ ಇಂದು ದಿಢೀರನೆ ರಾಣೆಬೆನ್ನೂರು ನಗರದಲ್ಲಿ ಪತ್ತೆಯಾಗಿದ್ದಾನೆ. ಮುಂಜಾಗ್ರತಾ ಕ್ರಮವಾಗಿ ಆತನನ್ನು ಹಾವೇರಿ ಜಿಲ್ಲಾಸ್ಪತ್ರೆಯ ಕೋವಿಡ್ ವಿಭಾಗಕ್ಕೆ ರವಾನಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.