ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ರೈತರ ತೋಟಗಳಿಗೆ ಲಗ್ಗೆಯಿಟ್ಟಿರುವ ಆನೆಗಳು ಬೆಳೆ ನಾಶ ಮಾಡಿವೆ.
ಶಿವಪುರ ಗ್ರಾಮದಲ್ಲಿ ರೈತರ ಹೊಲಗಳಿಗೆ ನುಗ್ಗಿದ ಆನೆಗಳು ಭತ್ತದ ಬೆಳೆ ಹಾನಿ ಮಾಡಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಶಿವಪುರ, ಮಂತಗಿ ಮತ್ತು ಕಾಮನಹಳ್ಳಿ ರೈತರ ಭತ್ತದ ಬೆಳೆಗೆ ಆನೆಗಳು ಪದೇ ಪದೆ ದಾಳಿ ಮಾಡುತ್ತಿದ್ದು, ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಆನೆಗಳು ಇರುವ ಶಂಕೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಸುಮಾರು 3 ಆನೆಗಳು ಪರಿಸರದಲ್ಲಿ ಬೀಡುಬಿಟ್ಟಿರುವ ಬಗ್ಗೆ ಸ್ಥಳಿಯರು ಶಂಕೆ ವ್ಯಕ್ತಪಡಿಸಿದ್ದು, ಅರಣ್ಯ ಪ್ರದೇಶದಲ್ಲಿ ಆನೆಗಳ ಹುಡುಕಾಟ ನಡೆಸಿದ್ದಾರೆ. ಅವುಗಳನ್ನು ಬೇರೆ ಕಡೆ ಕಳುಹಿಸುವ ಕಾರ್ಯ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.