ಹಾವೇರಿ: ಚುನಾವಣಾ ಆಯೋಗ ಮೋದಿ ಬಯೋಪಿಕ್ ಸೇರಿದಂತೆ ವಿವಿಧ ಚಿತ್ರಗಳ ಬಿಡುಗಡೆ ಮುಂದೂಡಿರುವ ಕ್ರಮವನ್ನ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಸ್ವಾಗತಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮತದಾನ ಅನ್ನುವುದು ಗೌಪ್ಯವಾಗಿ ನಡೆಯುವಂತದ್ದು. ಅದರ ಮೇಲೆ ಪರಿಣಾಮ ಪ್ರಭಾವ ಬೀರುವ ಅಂಶಗಳು ಮೇಲೆ ಕಡಿವಾಣ ಹಾಕಬೇಕು ಎಂದರು.
ಮತದಾನ ಪೂರ್ವ ಹಾಗೂ ಮತದಾನದ ನಂತರದ ಸಮೀಕ್ಷೆಗಳು ಮತದಾರರ ಮೇಲೆ ಪರಿಣಾಮ ಬೀರುತ್ತವೆ. ಮಾಧ್ಯಮಗಳು ಸಹ ಫಲಿತಾಂಶಕ್ಕೂ ಮುನ್ನ ಈ ಪಕ್ಷಕ್ಕೆ ಇಷ್ಟು ಮತಗಳು, ಆ ಪಕ್ಷಕ್ಕೆ ಇಷ್ಟು ಮತಗಳು ಎಂದು ಪ್ರಸಾರ ಮಾಡಬಾರದು ಎಂದರು.
ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಒಮ್ಮೆಲೆ ಹಿಂದೆ ಸರಿಯಲು ಕಾರಣವಿದೆ. ನಾವಾಗ ಆರಿಸಿದ ಅಭ್ಯರ್ಥಿಗಳು ಉತ್ತಮ ಪ್ರಜಾಕೀಯ ಪಕ್ಷದ ತತ್ವಗಳನ್ನ ಬಿಟ್ಟು, ಹಣ ಖರ್ಚು ಮಾಡಿ ಚುನಾವಣೆ ಎದುರಿಸುವ ಬಗ್ಗೆ ಮಾತನಾಡಿದರು. ಹಾಗಾಗಿ ಅಂದು ಅಭ್ಯರ್ಥಿಗಳನ್ನು ಬೇಡ ಎಂದೆವು ಎಂದು ತಿಳಿಸಿದರು.
ಒಳ್ಳೆಯ ಕಾರ್ಯ ಮಾಡಿದ್ದರೆ ಜನರು ತಾವಾಗಿಯೇ ಗುರ್ತಿಸಿ, ಆಯ್ಕೆ ಮಾಡುತ್ತಾರೆ. ಅದಕ್ಕಾಗಿ ಹಣದ ಹೊಳೆ ಹರಿಸಬೇಕಿಲ್ಲ ಎಂದೂ ಹೇಳಿದರು. ತಾವು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದು ತಿಳಿಸಿದರು.