ETV Bharat / state

ಸಿರಿಧಾನ್ಯಗಳ ಮೂಲಕ ತಾಯಿ ಭುವನೇಶ್ವರಿ ಚಿತ್ರ ರಚಿಸಿದ ಹಾವೇರಿ ಕಲಾವಿದ

ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕಾಗಿ ಗಣೇಶ್​ ಎಂಬ ಕಲಾವಿದ ಸಿರಿಧಾನ್ಯಗಳ ಮೂಲಕ ಭುವನೇಶ್ವರಿ ಚಿತ್ರ ರಚಿಸಿದ್ದಾರೆ.

bhuvaneswari art in millets
ಭುವನೇಶ್ವರಿ ಚಿತ್ರ
author img

By

Published : Dec 22, 2022, 11:06 PM IST

ಸಿರಿಧಾನ್ಯಗಳು ಮೂಲಕ ಭುವನೇಶ್ವರಿ ಚಿತ್ರ ರಚಿಸಿದ ಕಲಾವಿದ

ಹಾವೇರಿ: ಜಿಲ್ಲೆಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಸಮ್ಮೇಳನ ಹತ್ತಿರವಾಗುತ್ತಿದ್ದಂತೆ ಸಾಹಿತಿಗಳು, ಕಲಾವಿದರು ತಮ್ಮ ಕೃತಿ ರಚನೆಯಲ್ಲಿ ನಿರತರಾಗಿದ್ದಾರೆ. ಇಂತಹ ಕಲಾವಿದರಲ್ಲಿ ಒಬ್ಬರು ಹಾವೇರಿಯ ಗಣೇಶ ರಾಯ್ಕರ್.

ಗಣೇಶ ರಾಯ್ಕರ್ ಚಿನ್ನದ ಒಡವೆ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಸಾಹಿತ್ಯ ಸಮ್ಮೇಳನಕ್ಕಾಗಿ ಸಿರಿಧಾನ್ಯಗಳಲ್ಲಿ ಭುವನೇಶ್ವರಿ ಚಿತ್ರ ರಚಿಸಿದ್ದಾರೆ. ತಮ್ಮ ದಿನನಿತ್ಯದ ವ್ಯಾಪಾರ ವಹಿವಾಟು ಮುಗಿದ ನಂತರ ರಾತ್ರಿ 12 ರಿಂದ ಎರಡು ಗಂಟೆಯವರೆಗೆ ಕುಳಿತು ಈ ವಿಶಿಷ್ಟ ಕಲಾಕೃತಿಯನ್ನ ರಚಿಸಿದ್ದಾರೆ.

ಸುಮಾರು 30 ದಿನಗಳ ಕಾಲದಲ್ಲಿ ಗಣೇಶ ರಾಯ್ಕರ್ ಕೈಯಲ್ಲಿ ಈ ಭುವನೇಶ್ವರಿ ದೇವಿ ಚಿತ್ರ ರಚನೆಯಾಗಿದೆ. ಈ ಕಲಾಕೃತಿಗೆ ಸಿರಿಧಾನ್ಯಗಳಾದ 3050 ರಾಗಿ, 500 ನವಣಿ, 165 ಕೊರಲು, 185 ಸಾಸಿವೆ ಮತ್ತು 375 ಹಾರಕಗಳನ್ನು ಬಳಸಲಾಗಿದೆ.

ಜನವರಿ 6, 7 ಮತ್ತು 8 ರಂದು ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಈ ಚಿತ್ರ ಬಿಡುಗಡೆ ಮಾಡಬೇಕು ಎನ್ನುವದು ಕಲಾವಿದ ಗಣೇಶ ರಾಯ್ಕರ್​ರ ಆಸೆ. ಸಮ್ಮೇಳನ ಆರಂಭದ ದಿನ ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಷಿ ಮತ್ತು ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಈ ಕಲಾಕೃತಿ ಬಿಡುಗಡೆ ಮಾಡಿದರೆ, ನಾನು ಈ ಕಲಾಕೃತಿ ರಚಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎನ್ನುತ್ತಾರೆ ಗಣೇಶ್​.

ಸಾಹಿತ್ಯ ಸಮ್ಮೇಳನಕ್ಕಾಗಿ ಹಲವು ಕಲಾವಿದರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಈ ಕಲಾಕೃತಿ ಸಹ ನನ್ನ ಅಳಿಲುಸೇವೆ. ಹಾವೇರಿಯಲ್ಲಿ ಸಮ್ಮೇಳನ ನಡೆಯುತ್ತಿರುವ ಕಾರಣ ಈ ಕಲಾಕೃತಿ ರಚಿಸಿದ್ದೇನೆ. ನನಗೆ ಕೆಲಸ ಸಂತಸ ತಂದಿದೆ ಇದರ ಡಿಜಿಟಲ್ ಚಿತ್ರಣಗಳನ್ನ ಸಿಎಂ ಬಸವರಾಜ ಬೊಮ್ಮಾಯಿ, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಮತ್ತು ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರಿಗೆ ನೀಡುವುದಾಗಿ ಈಟಿವಿ ಭಾರತಕ್ಕೆ ಕಲಾವಿದ ಗಣೇಶ್​ ತಿಳಿಸಿದ್ದಾರೆ.

ಈ ಚಿತ್ರ ರಚನೆಗೆ ಮುನ್ನ ಸಿರಿಧಾನ್ಯ ಮತ್ತು ಭತ್ತದಲ್ಲಿ ನರೇಂದ್ರ ಮೋದಿ, ಸ್ವಾಮಿ ವಿವೇಕಾನಂದ, ಗಣೇಶ, ಸೇರಿದಂತೆ ವಿವಿಧ ಗಣ್ಯರ ಕಲಾಕೃತಿ ರಚಿಸಿದ್ದಾರೆ. ಅಲ್ಲದೇ ಮತದಾನ ಜಾಗೃತಿ ಕೊರೊನಾ ಎಚ್ಚರಿಕೆ ಸಂದೇಶಗಳನ್ನ ಸಿರಿಧಾನ್ಯ ಕಲಾಕೃತಿಗಳ ಮೂಲಕ ನೀಡಿದ್ದಾರೆ. ಸಿರಿಧಾನ್ಯ ಭಾರತೀಯರ ಪುರಾತನ ಆಹಾರ ಧಾನ್ಯಗಳು.

ಇವುಗಳ ಸೇವನೆಯಿಂದ ಹಿಂದಿನ ಜನ ಸಾಕಷ್ಟು ಆರೋಗ್ಯದಿಂದ ಇದ್ದರು. ಆದರೆ ಈಗ ಸಿರಿಧಾನ್ಯಗಳನ್ನ ಮರೆತಿರುವ ಜನರು ವಿವಿಧ ಖಾಯಲೆಗಳಿಂದ ಬಳಲುತ್ತಿದ್ದಾರೆ. ಕಲಾಕೃತಿಗಳ ಮೂಲಕ ಜನರಿಗೆ ಸಿರಿಧಾನ್ಯದ ಮಹತ್ವ ತಿಳಿಸುತ್ತಿರುವುದಾಗಿ ಗಣೇಶ ತಿಳಿಸಿದ್ದಾರೆ.

ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ: ಮಾಜಿ ಸಚಿವ ರಮಾನಾಥ್ ರೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.