ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನಿಟಗೇನಕೊಪ್ಪದಲ್ಲಿ ಗಾಯಗೊಂಡು ಬಳಲುತ್ತಿದ್ದ ಜಿಂಕೆಯನ್ನು ಕಂಡ ಗ್ರಾಮಸ್ಥರು ಜಿಂಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟುಬಂದಿದ್ದಾರೆ.
ಸುದ್ದಿಯ ವಿವರ:
ಕಾಡಂಚಿನ ಜಮೀನಿನಲ್ಲಿದ್ದ ನಾಯಿಗಳು ಬೆನ್ನುಹತ್ತಿದ್ದರಿಂದ ಜಿಂಕೆ ದಾರಿ ತಪ್ಪಿ ನಾಡಿಗೆ ಬಂದಿತ್ತು.ಇದನ್ನು ನೋಡಿದ ಸ್ಥಳೀಯರು ಕಾಡು ಪ್ರಾಣಿಯನ್ನು ನಾಯಿಗಳಿಂದ ರಕ್ಷಿಸಿ, ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಜಿಂಕೆ ಚೇತರಿಸಿಕೊಳ್ಳುತ್ತಿದ್ದಂತೆ ಕಾಡಿಗೆ ಬಿಟ್ಟುಬಂದಿದ್ದಾರೆ.