ಹಾವೇರಿ : ರಾಜ್ಯದಲ್ಲಿ ಸರಿಯಾದ ರೀತಿಯಲ್ಲಿ ವ್ಯಾಪಾರ, ವಾಹಿವಾಟು ನಡೆಯದ ಕಾರಣ ಜಮೀನಿನಲ್ಲಿ ಬೆಳೆದಿದ್ದ ಸಾಂಬಾರು ಸೌತೆಕಾಯಿಗಳು ಹಾಳಾಗುತ್ತಿವೆ ಎಂದು ಜಿಲ್ಲೆಯ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಚಿಕ್ಕಯಡಚಿ ಗ್ರಾಮದ ಬಸವರಾಜ ದೊಡ್ಡಬಸಪ್ಪನವರ ಎಂಬ ರೈತ ತನ್ನ ಎರಡೆಕರೆ ಜಮೀನಿನಲ್ಲಿ ಸಾಂಬಾರು ಸೌತೆಕಾಯಿ ಬೆಳೆದಿದ್ದಾರೆ. ಕೊರೊನಾ ಉಪಟಳದಿಂದ ಭಾರತ ಲಾಕ್ಡೌನ್ ಆದ ಪರಿಣಾಮ ಯಾವುದೇ ವಾಹಿವಾಟಿಲ್ಲದೆ ಜಮೀನಿನಲ್ಲೇ ಬೆಳೆ ಹಾಳಾಗುತ್ತಿದ್ದು, ರೈತರು ನೊಂದಿದ್ದಾರೆ.
ಬೆಳೆದ ಬೆಳೆಗೆ ಸೂಕ್ತ ರೀತಿಯ ಬೆಲೆಯೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೃಷಿ ಸಚಿವರು ಅನ್ನದಾತರನ್ನು ಮರೆತಿದ್ದಾರೆ. ನಮ್ಮ ಗೋಳು ಕೇಳುತ್ತಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ ವಿರುದ್ಧ ರೈತರು ಗರಂ ಆಗಿದ್ದಾರೆ.
ಈ ಸಂಬಂಧ ವಿಡಿಯೋ ಮಾಡಿದ ರೈತರೊಬ್ಬರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.