ETV Bharat / state

ಹಾವೇರಿಯಿಂದ ಬೆಂಗಳೂರಿಗೆ ಮಾವು ಮಾರಲು ಹೋಗಿದ್ದ ವ್ಯಕ್ತಿಗೆ ಕೊರೊನಾ: ಹೆಚ್ಚಿದ ಆತಂಕ - ಮಾರುಕಟ್ಟೆಗೆ ಮಾವಿನಕಾಯಿ ತೆಗೆದುಕೊಂಡು ಹೋಗಿದ್ದ ವ್ಯಕ್ತಿಗೆ ಕೊರೊನಾ

ನಿನ್ನೆ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಮಾವು ತೆಗೆದುಕೊಂಡು ಹೋಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.

hospital
ಹಾವೇರಿ ಕೋವಿಡ್-19 ಆಸ್ಪತ್ರೆ
author img

By

Published : May 23, 2020, 10:37 AM IST

ಹಾವೇರಿ: ಮೇ 5ರಿಂದ ಮೇ 12ರವರೆಗೆ ಮೂರು ಬಾರಿ ಮುಂಬೈಗೆ ಹೋಗಿ ಬಂದಿದ್ದ ಲಾರಿ ಚಾಲಕನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಚಾಲಕ ನಿನ್ನೆ ತಡರಾತ್ರಿ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದಾನೆ.

ಹಾವೇರಿ ಕೋವಿಡ್-19 ಆಸ್ಪತ್ರೆ

ಲಾರಿ ಚಾಲಕ ಗಂಟಲು ದ್ರವದ ಮಾದರಿಯನ್ನು ಟೆಸ್ಟ್​ಗೆ ನೀಡಿದ ನಂತರವೂ ಸಹ ಶುಕ್ರವಾರ ಬೆಂಗಳೂರಿಗೆ ಹೋಗಿದ್ದಾನೆ. ವರದಿ ಬರುವ ಮುನ್ನವೇ ಚಾಲಕ ಬೆಂಗಳೂರಿಗೆ ಹೋಗಿ ಬಂದಿರುವುದು ತೀವ್ರ ಆತಂಕ ಮೂಡಿಸಿದೆ.

ನಿನ್ನೆ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಮಾವು ತೆಗೆದುಕೊಂಡು ಹೋಗಿದ್ದ. ಸೋಂಕು ದೃಢಪಟ್ಟ ನಂತರ ಚಾಲಕನನ್ನು ಹುಡುಕಿ ಕೋವಿಡ್-19 ಆಸ್ಪತ್ರೆಗೆ ಜಿಲ್ಲಾಡಳಿತ ದಾಖಲಿಸಿದೆ. ಚಾಲಕನ ಓಡಾಟದಿಂದ ಈಗ ಆತಂಕ ಮೂಡಿದೆ. ಸೋಂಕಿತನ‌ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರನ್ನು ಜಿಲ್ಲಾಡಳಿತ ಪತ್ತೆ ಹಚ್ಚುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.