ಹಾವೇರಿ: ಕೊರೊನಾ ಸೋಂಕಿನ ಭೀತಿ ಇದೀಗ ಪೊಲೀಸರಿಗೂ ಕಾಡಲಾರಂಭಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಪೊಲೀಸ್ ಠಾಣೆಗಳ ಮುಂದೆ ಬ್ಯಾರಿಕೇಡ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.
ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಠಾಣೆಗೆ ಆಗಮಿಸುತ್ತಿರುವ ಕಾರಣ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. ಠಾಣೆ ಹೊರಗಡೆ ಟೇಬಲ್ ಹಾಕಿಕೊಂಡು ಕುಳಿತು, ಜನರ ಸಮಸ್ಯೆ ಆಲಿಸಲು ಇಲಾಖೆ ನಿರ್ಧರಿಸಿದೆ.
ಹಾವೇರಿ ನಗರ ಠಾಣೆ, ಗ್ರಾಮೀಣ ಠಾಣೆಗಳ ಮುಂದೆ ಬ್ಯಾರಿಕೇಡ್ ಹಾಕಲಾಗಿದೆ. ಹಾವೇರಿ ಸೇರಿದಂತೆ ರಾಜ್ಯದ ಹಲವೆಡೆ ಪೊಲೀಸ್ ಸಿಬ್ಬಂದಿಗೆ ಮಹಾಮಾರಿ ವಕ್ಕರಿಸಿರೋದರಿಂದ ಈ ನಿರ್ಧಾರ ಮಾಡಲಾಗಿದೆ.