ರಾಣೆಬೆನ್ನೂರು: ಲಾಕ್ಡೌನ ಇದ್ದರೂ ರಾಣೆಬೆನ್ನೂರಿನ ಜನ ಆದೇಶ ಉಲ್ಲಂಘನೆ ಮಾಡಿ ಬೆಳ್ಳಂಬೆಳಗ್ಗೆ ರಸ್ತೆಗೆ ಇಳಿದಿದ್ದಾರೆ. ಇದರಿಂದ ಪೋಲಿಸರು ಲಾಠಿ ಬೀಸುವ ಬದಲು ಕೈ ಮುಗಿದು ಬೇಡಿಕೊಳ್ಳುವಂತಹ ಸನ್ನಿವೇಶ ಕಂಡು ಬಂದಿದೆ.
ರಾಣೆಬೆನ್ನೂರ ಗ್ರಾಮಾಂತರ ಠಾಣೆಯ ಸಿಪಿಐ ಸುರೇಶ ಸಗರಿ ಹಾಗೂ ಪಿಎಸ್ಐ ಮೇಘರಾಜ್ ಕೈ ಮುಗಿದು ಜನರಲ್ಲಿ ಮನೆಗೆ ತೆರಳುವಂತೆ ಬೇಡಿಕೊಳ್ಳುತ್ತಿದ್ದರು. ದಯಮಾಡಿ ಹೊರಗಡೆ ಬರಬೇಡಿ. ನಿಮ್ಮ ಆರೋಗ್ಯ ಸಲುವಾಗಿ ಮನೆಯಲ್ಲಿ ಇರಿ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎಲ್ಲರ ಜೀವ ಉಳಿಸಿ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಿ ಎಂದು ಜಾಗೃತಿ ಮೂಡಿಸುತ್ತಿದ್ದರು.