ETV Bharat / state

ಕಾಂಗ್ರೆಸ್‌ನವರ ರೆಸಾರ್ಟ್​ ರಾಜಕೀಯದ ಮಾತು ಹಾಸ್ಯಾಸ್ಪದ: ಬಿ.ಸಿ.ಪಾಟೀಲ್ - BJP is ready to go to the resort

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎನ್ನುವಂತೆ ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ ಎಂದು ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದರು.

Agriculture Minister BC Patil
ಕೃಷಿ ಸಚಿವ ಬಿ ಸಿ ಪಾಟೀಲ್
author img

By

Published : May 12, 2023, 7:09 AM IST

ಹಿರೇಕೆರೂರಿನ ಸ್ವಗೃಹದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

ಹಾವೇರಿ : ಬಿಜೆಪಿಯವರು ರೆಸಾರ್ಟ್​ಗೆ ಹೋಗಲು ಸಿದ್ದತೆ ನಡೆಸುತ್ತಿದ್ದಾರೆ ಎಂಬ ಪ್ರತಿಪಕ್ಷದವರ ಟೀಕೆಯ ಬಗ್ಗೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕಾಂಗ್ರೆಸ್‌ನವರು ರೆಸಾರ್ಟ್​ ರಾಜಕೀಯದ ಬಗ್ಗೆ ಮಾತನಾಡಿರುವುದು ಹಾಸ್ಯಾಸ್ಪದ ಎಂದರು. ಹಿರೇಕೆರೂರಿನ ಸ್ವಗೃಹದಲ್ಲಿ ಗುರುವಾರ ಮಾತನಾಡಿದ ಅವರು, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎನ್ನುವಂತೆ ಅವರು ಸಿಎಂ ಹುದ್ದೆಗೆ ಬಡಿದಾಡಿದವರು ಎಂದರು.

ದಾಂಡೇಲಿಯಲ್ಲಿ ಮಾತ್ರ ರೆಸಾರ್ಟ್ ಇದೆಯೇ. ಈ ಬಾರಿ ಬಸ್‌ನಲ್ಲಿ ಹೋಗುತ್ತಾರೆ ಎಂಬ ಕೀಳು ಆರೋಪ ಯಾಕೆ? ಹೋಗುವುದಾದರೆ ಕಾರ್‌, ವಿಮಾನದಲ್ಲಿ ಹೋಗುತ್ತಾರೆ. ಅಷ್ಟಕ್ಕೂ ಈ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಅಭಿವೃದ್ದಿ ಕಾರ್ಯಗಳು ನನ್ನ ಕೈ ಹಿಡಿಯುತ್ತವೆ. 13 ರಂದು ಫಲಿತಾಂಶ ಬರಲಿದ್ದು ಬಿಜೆಪಿ ಸರ್ಕಾರ ರಚಿಸಲಿದೆಎಂದು ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : 2023ರ ಎಕ್ಸಿಟ್​ ಪೋಲ್ಸ್​ ರಾಜಕೀಯ ಭವಿಷ್ಯ ನಿಜವಾಗುತ್ತಾ? 2018ರಲ್ಲಿ ಸಮೀಕ್ಷೆಗಳು ಏನ್​ ಹೇಳಿದ್ದವು?

ಹೆಚ್​.ಡಿ.ಕುಮಾರಸ್ವಾಮಿ ಮನೆಗೆ ಹೋಗುವ ಪ್ರಸಂಗ ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಕಾದು ನೋಡಿ ಗೊತ್ತಾಗುತ್ತೆ ಎಂದರು. ಎಕ್ಸಿಟ್ ಪೋಲ್ ನಿರ್ಧಾರ ಮಾಡುವವರು ಎಕ್ಸಿಟ್ ಪೋಲ್ ಮಾಡಿದವರಲ್ಲ. ಅದನ್ನು ಮಾಡುವವರು ಮತದಾರರು. ಅಂತಿಮ ನಿರ್ಧಾರ ಅವರದ್ದೇ ಎಂದು ಪಾಟೀಲ್ ಹೇಳಿದರು.

ಈ ಸಲ ಅತಂತ್ರ ಪ್ರಶ್ನೆನೇ ಇಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಗುಜರಾತ್‌ನಲ್ಲಿ ಈ ಹಿಂದೆ ಇದೇ ರೀತಿಯ ಎಕ್ಸಿಟ್ ಪೋಲ್ ಆಗಿದ್ದವು. ಅಲ್ಲಿ ಮತ ಏಣಿಕೆಯ ನಂತರ ಎಲ್ಲವೂ ಬದಲಾಗಿತ್ತು ಎಂದು ಬಿ.ಸಿ.ಪಾಟೀಲ್ ಉದಾಹರಿಸಿದರು.

ಇದನ್ನೂ ಓದಿ : ಜೆಡಿಎಸ್​​ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿಲ್ಲ : ಉಪ್ಪು ಮುಟ್ಟಿ ಪ್ರಮಾಣ ಮಾಡಿದ ಕಾಂಗ್ರೆಸ್ ಅಭ್ಯರ್ಥಿ

ಜನರ ಒಲವು ಬಿಜೆಪಿ ಕಡೆಗಿದೆ. ಕಾಂಗ್ರೆಸ್‌ನವರು ಈಗ ಉತ್ಸಾಹದಲ್ಲಿದ್ದಾರೆ. ಆದರೆ ಫಲಿತಾಂಶದ ನಂತರ ನಾವು ಉತ್ಸಾಹದಲ್ಲಿರುತ್ತೇವೆ. ಈ ಬಾರಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಕ್ಷೇತ್ರದಲ್ಲಿ ಪ್ರಜ್ಞಾವಂತರಿದ್ದು ಶೇ 85 ರಷ್ಟು ಮತದಾನವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಈ ಬಾರಿ ರೇಣುಕಾಚಾರ್ಯ ಸೋಲ್ತಾರೆ, ನನಗೆ ಎಲ್ಲಾ ವರ್ಗದ ಮತದಾರರು ಆಶೀರ್ವಾದ ಮಾಡಿದ್ದಾರೆ: ಕಾಂಗ್ರೆಸ್ ಅಭ್ಯರ್ಥಿ ಶಾಂತನಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.