ETV Bharat / state

ಕಾಂಗ್ರೆಸ್ ಪಕ್ಷ ಸಂಪೂರ್ಣ ದಿವಾಳಿಯಾಗಿದೆ: ಸಚಿವ ಶ್ರೀರಾಮುಲು - ETV Bharat kannada News

ಕಾಂಗ್ರೆಸ್ ವಿರುದ್ಧ ಹಾವೇರಿಯಲ್ಲಿ ಶ್ರೀರಾಮುಲು ವಾಗ್ದಾಳಿ ನಡೆಸಿದರು.

Minister Sriramulu
ಸಚಿವ ಶ್ರೀರಾಮುಲು
author img

By

Published : Mar 31, 2023, 10:26 PM IST

ದಿವಾಳಿಯಾದ ಕಾಂಗ್ರೆಸ್ ಪಾರ್ಟಿ ಹರಾಜಿಗೆ ಬರಬೇಕಿದೆ ಎಂದ ಸಚಿವ ಶ್ರೀರಾಮುಲು.

ಹಾವೇರಿ : ಇವತ್ತಿನ ದಿನ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ದಿವಾಳಿಯಾಗಿದ್ದು, ಮುಂದಿನ ದಿನಗಳಲ್ಲಿ ಹರಾಜಿಗೆ ಬರಲಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಶ್ರೀರಾಮುಲು ಅವರು, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷವೂ 140 ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್​ ಪಕ್ಷ ಬಹಳಷ್ಟು ವರ್ಷಗಳಿಂದ ಜನರಿಗೆ ಟೋಪಿ ಹಾಕುವುದರ ಜೊತೆಗೆ ಜನರ ಕಿವಿಯಲ್ಲಿ ಹೂ ಇಡುತ್ತಾ ಬಂದಿದೆ. ಡೋಂಗಿ ಮಾತುಗಳನ್ನಾಡುವದು ಕಾಂಗ್ರೆಸ್ಸಿಗರಿಗೆ ಅಭ್ಯಾಸವಾಗಿದೆ ಎಂದು ಶ್ರೀರಾಮುಲು ತಿಳಿಸಿದರು.

ದಾವಣಗೆರೆಯಲ್ಲಿ ನಡೆದ ಮಹಾಸಂಗಮ ಕಾರ್ಯಕ್ರಮ ಹಿಂದೆ ಆಗಿರಲಿಲ್ಲಾ ಮುಂದೆ ಆಗುವುದಿಲ್ಲ ಎನ್ನುವಂತಾಗಿದೆ. ಕಾರ್ಯಕ್ರಮ ನೋಡಿದ ರಾಜ್ಯದ ಜನರಲ್ಲಿ ಬಿಜೆಪಿ ಬಗ್ಗೆ ವಿಶ್ವಾಸ ಬಂದಿದೆ. ಇನ್ನೊಂದೆಡೆ ಎಸ್ಸಿ ಎಸ್ಟಿಗೆ ಮೀಸಲಾತಿ ಹೆಚ್ಚಳ ಮಾಡಿದಾಗಿನಿಂದ ಕಾಂಗ್ರೆಸ್ಸಿಗರು ನಿದ್ದೆಗೆಟ್ಟಿದ್ದಾರೆ. ಅವರು ಇಷ್ಟು ದಿನ ಈ ವಿಷಯದಲ್ಲಿ ಮೂಗಿಗೆ ತುಪ್ಪ ಹಚ್ಚುತ್ತಾ ಬಂದಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏನೇ ಸರ್ಕಸ್ ಮಾಡಿದರು ಗೆಲವು ಬಿಜೆಪಿಯದಾಗುತ್ತೆ. ಇದನ್ನ ಯಾರಿಂದಲೂ ತಪ್ಪಿಸಲಾಗುವುದಿಲ್ಲಾ. ಹಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಮಹಾಮಾರಿ ಹಬ್ಬ ಶುರುವಾಗುತ್ತೆ ಎಂದು ಶ್ರೀರಾಮುಲು ಹೇಳಿದರು.

ಕೆಲವೇ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಬಹುತೇಕವಾಗಿ ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷ ಬಿಜೆಪಿ. ವಿಶ್ವದಲ್ಲಿ ಅತಿದೊಡ್ಡ ಪಾರ್ಟಿ ಬಿಜೆಪಿ, ನಮ್ಮ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವ ಮೆಚ್ಚುವ ನಾಯಕ ವಿಶ್ವವನ್ನು ಗೆದ್ದ ನಾಯಕರಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದ ಚುನಾವಣೆ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿರಬಹುದು ಹೊರತು ಬೇರೆ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿಲ್ಲಾ ಎಂದು ಶ್ರೀರಾಮುಲು ತಿಳಿಸಿದರು.

ಶಾಸಕರು ಮರಳಾಗಿ ಕಾಂಗ್ರೆಸ್​ಗೆ ಹೋದರೆ ಮುಂದಿನ ದಿನಗಳಲ್ಲಿ ತಮ್ಮ ನಿರ್ಧಾರಕ್ಕೆ ಪಶ್ಚಾತಾಪ ಅನುಭವಿಸಲಿದ್ದಾರೆ. ಆದರೆ 2018 ರಲ್ಲಿ ಈ ಪರಿಸ್ಥಿತಿ ಇರಲಿಲ್ಲಾ. ನಾವು ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಸರ್ಕಾರ ಮಾಡಿಲ್ಲ. ಬದಲಿಗೆ ಅವರನ್ನು ಮತ್ತೆ ನಿಲ್ಲಿಸಿ ಬಿಜೆಪಿಯಿಂದ ಆಯ್ಕೆ ಮಾಡಿ ಸರ್ಕಾರ ರಚನೆ ಮಾಡಿದ್ದೇವೆ. ಕಾಂಗ್ರೆಸ್‌ನವರಿಗೆ ತಮ್ಮ ಮನೆ ಸರಿ ಮಾಡಿಕೊಳ್ಳಲು ಆಗಲಿಲ್ಲಾ. ಆ ರೀತಿಯಾಗದಂತೆ ನೋಡಿಕೊಳ್ಳಬೇಕಾಗಿದ್ದು ಕಾಂಗ್ರೆಸ್ ಮುಖಂಡರು, ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶ್ರೀರಾಮು ಹೇಳಿದರು.

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಸಿದ್ದರಾಮಯ್ಯ ಸೋಲಿಸಲು ಸಜ್ಜಾಗಿವೆ ಎಂಬ ಆರೋಪಕ್ಕೆ ಮಾತನಾಡಿದ ಶ್ರೀರಾಮುಲು ಈ ರೀತಿಯ ಹೊಂದಾಣಿಕೆ ಮಾಡಿಕೊಂಡಿದ್ದರೆ 2018 ರಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲುತ್ತಿದ್ದರು. ಸಿದ್ದರಾಮಯ್ಯ ಜೆಡಿಎಸ್‌ನ ದೇವಗೌಡರನ್ನು ಸ್ಮರಿಸಬೇಕು ಏಕೆಂದರೆ ಅಂದು ಜೆಡಿಎಸ್ ಅಭ್ಯರ್ಥಿ 22 ಸಾವಿರ ಮತ ಪಡೆದರು. ಆ ಮತಗಳೆಲ್ಲಾ ಬಿಜೆಪಿ ಮತಗಳು ಎಂದರು.

ಇದನ್ನೂ ಓದಿ : ಎಂ.ಎಂ.ಹಿರೇಮಠ ಜಾತಿ ಪ್ರಮಾಣ ಪತ್ರ ಅಸಿಂಧುಗೊಳಿಸಿ ಡಿಸಿ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.