ETV Bharat / state

ಉಕ್ರೇನ್​​ನಲ್ಲಿ ಮೃತಪಟ್ಟ ನವೀನ್​ ನಿವಾಸಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ

ಉಕ್ರೇನ್​ನಲ್ಲಿ ಮೃತಪಟ್ಟ ನವೀನ್​​ ನಿವಾಸಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

congress leaders visits to naveen home who died in Ukraine
ಉಕ್ರೇನ್​​ನಲ್ಲಿ ಮೃತಪಟ್ಟ ನವೀನ್​ ನಿವಾಸಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ
author img

By

Published : Mar 2, 2022, 1:06 PM IST

Updated : Mar 2, 2022, 1:46 PM IST

ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮೃತಪಟ್ಟ ನವೀನ್​​ ನಿವಾಸಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ಮೃತ ನವೀನ್​ ನಿವಾಸಕ್ಕೆ ಭೇಟಿ ನಿಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಕಾಂಗ್ರೆಸ್ ಮುಖಂಡ ಪ್ರಕಾಶ ಕೋಳಿವಾಡ ಮಾತನಾಡಿ, ಮೃತ ನವೀನ ಪಿಯುಸಿಯಲ್ಲಿ ಶೇಕಡಾ 97ರಷ್ಟು ಫಲಿತಾಂಶ ಪಡೆದಿದ್ದ. ಉಕ್ರೇನ್​​ನಲ್ಲಿ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಆಗುವ ಹಿನ್ನೆಲೆ ಅಲ್ಲಿಗೆ ವಿದ್ಯಾರ್ಥಿಗಳು ಹೋಗುತ್ತಾರೆ. ರಾಜ್ಯದಲ್ಲಿ ಡೊನೇಷನ್ ಹಾವಳಿ ತಡೆಯಬೇಕು. ರಾಣೆಬೆನ್ನೂರು ತಾಲೂಕಿನ ಏಳು ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿದ್ದಾರೆ. ಸದ್ಯ ಇಂಡಿಯನ್ ಫ್ಲ್ಯಾಗ್​ ಹಿಡಿದು ಸ್ಟೇಶನ್​ನತ್ತ ಓಡೋ ಪರಿಸ್ಥಿತಿ ಅಲ್ಲಿದೆ ಎಂದರು.

ಉಕ್ರೇನ್​​ನಲ್ಲಿ ಮೃತಪಟ್ಟ ನವೀನ್​ ನಿವಾಸಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ

ನಮ್ಮ ವಿಮಾನಗಳನ್ನೇ ಕಳುಹಿಸಿ ವಿದ್ಯಾರ್ಥಿಗಳನ್ನ ಕರೆತರುತ್ತೇವೆ: ಸಂಸದ ಶಿವಕುಮಾರ್​ ಉದಾಸಿಯವರಿಗೆ ಅಲ್ಲಿನ ವಿದ್ಯಾರ್ಥಿಗಳು ಫೋನ್, ಮೆಸೇಜ್ ಮಾಡಿದರೆ ರಿಪ್ಲೈ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಒಪ್ಪಿದರೆ ನಾಳೆಯೇ ನಮ್ಮ ವಿಮಾನ ಕಳುಹಿಸಿ ರಾಣೆಬೆನ್ನೂರು ತಾಲೂಕಿನ ಏಳೂ ಜನರನ್ನು ಕರೆದುಕೊಂಡು ಬರುವ ವ್ಯವಸ್ಥೆ ಮಾಡುತ್ತೇವೆ.

ನಮ್ಮ ಕಂಪನಿಯ ವಿಮಾನ ಇವೆ. ವಿಮಾನ ಅಸೋಸಿಯೇಷನ್ ಜೊತೆ ಮಾತನಾಡಿ ಎಲ್ಲ ವಿಮಾನಗಳನ್ನು ಕಳುಹಿಸಿ ಉಚಿತವಾಗಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡುತ್ತೇವೆ. ಉಳಿದ ವಿಮಾನಗಳಿಗೆ ಕೇಂದ್ರ ಸರ್ಕಾರ ಕೇವಲ ಇಂಧನ ಹಾಗೂ ಪೈಲಟ್ ಖರ್ಚು ಕೊಟ್ಟರೆ ಸಾಕು. ಇದಕ್ಕೆ ಕೇಂದ್ರ ಅನುಮತಿ ನೀಡಬೇಕು ಎಂದರು.

ಇದನ್ನೂ ಓದಿ: ಉಕ್ರೇನ್​ನಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರ.. ನವೀನ್ ಪಾರ್ಥಿವ ಶರೀರ ತರುವ ಬಗ್ಗೆ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದೇನು?

ಮೃತ ನವೀನ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಎಂಎಲ್​​​ಸಿ ಕಲಿತು ಪಿಹೆಚ್​ಡಿ ಮಾಡ್ತಿರೋ ನವೀನ ಅಣ್ಣ ಹರ್ಷನಿಗೆ ಸರ್ಕಾರಿ ಉದ್ಯೋಗ ಒದಗಿಸಿಕೊಡಬೇಕು ಎಂದರು.

ಜೋಶಿ ಹೇಳಿಕೆಗೆ ಪ್ರತಿಕ್ರಿಯೆ: ಯೋಗ್ಯತೆ ಇಲ್ಲದವರು ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗ್ತಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಸರಿಯಲ್ಲ. ನವೀನ್ ಪಿಯುಸಿನಲ್ಲಿ ಶೇ. 97.5ರಷ್ಟು ಅಂಕ‌ ಗಳಿಸಿದ್ದಅನೆ. ಹಾಗಾದರೆ ಮೃತ ನವೀನ್​ಗೆ ಯೋಗ್ಯತೆ ಇಲ್ವಾ ಎಂದು ಪ್ರಶ್ನಿಸಿದರು. ಇಲ್ಲಿ ವೈದ್ಯಕೀಯ ವ್ಯಾಸಂಗ ವೆಚ್ಚದಾಯಕವಾಗಿದೆ. ಈ ಕಾರಣಕ್ಕೆ ನವೀನ್ ಉಕ್ರೇನ್‌ಗೆ ಹೋಗಿದ್ದ ಹೊರತು, ಯೋಗ್ಯತೆ ಇಲ್ಲದೇ ಅಲ್ಲ. ಉಕ್ರೇನ್​ಗೆ ತೆರಳಿದವರು ಆಯೋಗ್ಯರಲ್ಲ. ನಿಮ್ಮ ಸರ್ಕಾರ ಅಯೋಗ್ಯ ಸರ್ಕಾರ, ಮೊದಲು ಡೊನೆಷನ್ ಹಾವಳಿ ತಪ್ಪಿಸಿ ಎಮದರು. ಅಲ್ಲದೇ ಜೋಷಿಯವರು ತಮ್ಮ ಮಾತನ್ನು ಹಿಂಪಡೆಯಬೇಕು ಎಂದು ಪ್ರಕಾಶ್ ಕೋಳಿವಾಡ ಆಗ್ರಹಿಸಿದರು.

Last Updated : Mar 2, 2022, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.