ETV Bharat / state

ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿದ ಸದಾಶಿವ ಶ್ರೀ - ಈಟಿವಿ ಭಾರತ ಕನ್ನಡ

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ - ಸಂತಾಪ ಸೂಚಿಸಿದ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು

condolences-to-siddeshwar-swamiji-by-hukkerimath-sadashiva-swamiji
ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿದ ಸದಾಶಿವ ಶ್ರೀ
author img

By

Published : Jan 3, 2023, 4:34 PM IST

Updated : Jan 3, 2023, 5:03 PM IST

ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿದ ಸದಾಶಿವ ಶ್ರೀ

ಹಾವೇರಿ: ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾಡುಕಂಡ ಜ್ಞಾನಿಗಳಲ್ಲಿ, ತತ್ವಜ್ಞಾನಿಗಳಲ್ಲಿ ಅವರು ಸಹ ಒಬ್ಬರಾಗಿದ್ದರು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮ ಪ್ರವಚನಗಳ ಮೂಲಕ ಸಿದ್ದೇಶ್ವರ ಶ್ರೀಗಳು ಮಾರ್ಗದರ್ಶನ ನೀಡುತ್ತಿದ್ದರು. ತಮ್ಮ ವಾಣಿಗಳ ಮೂಲಕ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಹೇಳಿದರು.

ನಮ್ಮ ಹುಕ್ಕೇರಿಮಠಕ್ಕೆ ಎರಡು ಮೂರು ಬಾರಿ ಸಿದ್ದೇಶ್ವರ ಶ್ರೀಗಳು ಆಗಮಿಸಿದ್ದರು. ಅಲ್ಲದೇ ಹಾವೇರಿ ಸುತ್ತಮುತ್ತ ಹಲವು ಪ್ರವಚನಗಳನ್ನು ನೀಡಿದ್ದರು. ಇಂತಹವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹೇಳಿದರು.

ನಾನು ಬಾಲ್ಯದಿಂದಲೇ ಅವರ ಪ್ರವಚನಗಳಿಂದ ಆಕರ್ಷಿತನಾಗಿದ್ದೆ. ಕಳೆದ 25 ವರ್ಷಗಳ ಹಿಂದೆ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರಶ್ರೀಗಳನ್ನು ದರ್ಶಿಸಿ ಪ್ರವಚನ ಕೇಳಿದ್ದೆ. ಅಂದಿನಿಂದಲೂ ಸಿದ್ದೇಶ್ವರ ಶ್ರೀಗಳು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಹೇಳಿದರು.

ಇದನ್ನೂ ಓದಿ : ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ: ಪ್ರಧಾನಿ ಮೋದಿ, ಕೇಂದ್ರ ಸಚಿವ ಜೋಶಿ ಸೇರಿ ಗಣ್ಯರ ಸಂತಾಪ

Last Updated : Jan 3, 2023, 5:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.