ETV Bharat / state

ಶಿಗ್ಗಾಂವಿ ಜನರ ಮತಕ್ಕೆ ತ್ರಿಬಲ್​ ಪವರ್​ ಇದೆ.. ಸಿಎಂ ಬೊಮ್ಮಾಯಿ ಹೀಗಂದಿದ್ದೇಕೆ? - ಹಾವೇರಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯ ತಿಮ್ಮಾಪುರ ಗ್ರಾಮದಲ್ಲಿ ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮನೆ ಬಾಗಿಲಿಗೆ ದಾಖಲೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

minister-basavaraj
ಸಿಎಂ ಬೊಮ್ಮಾಯಿ
author img

By

Published : Mar 26, 2022, 3:59 PM IST

ಹಾವೇರಿ: ತವರು ಕ್ಷೇತ್ರದ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ. ಶಿಗ್ಗಾಂವಿ-ಸವಣೂರು ಕ್ಷೇತ್ರದ ಜನರ ಮತಕ್ಕೆ ತ್ರಿಬಲ್​ ಶಕ್ತಿ ಇದೆ. ಕಾರಣ ನೀವು ಅಮೂಲ್ಯ ಹಾಕಿದ ಮತಗಳಿಂದ ನಾನು ಶಾಸಕನಾದೆ, ಸಚಿವನಾದೆ, ಈಗ ಮುಖ್ಯಮಂತ್ರಿಯಾಗಿದ್ದೇನೆ. ಹೀಗಾಗಿ ನಿಮ್ಮ ಮತಕ್ಕೆ ತ್ರಿಬಲ್​ ಪವರ್​ ಇದೆ ಎಂದು ಸಿಎಂ ಹೇಳಿದ್ದಾರೆ.

ಶಿಗ್ಗಾಂವಿ ತಾಲೂಕಿನ ತಿಮ್ಮಾಪುರದಲ್ಲಿ ಕಂದಾಯ ಇಲಾಖೆಯಿಂದ ನಡೆಸಲಾದ ಮನೆ ಬಾಗಿಲಿಗೆ ದಾಖಲೆಗಳು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನರು ನನಗೆ ಮತ ಹಾಕಿದ್ದರಿಂದಲೇ ನಾನು ಶಾಸಕ, ಸಚಿವ, ಮುಖ್ಯಮಂತ್ರಿ ಕೂಡ ಆಗಿದ್ದೇನೆ. ಇಲ್ಲಿಯ ಜನರ ಮತಕ್ಕೆ ಖಂಡಿತವಾಗಿಯೂ ತ್ರಿಬಲ್ ಶಕ್ತಿ ಇದೆ ಎಂದರು.

ನನ್ನನ್ನು ಸೇರಿದಂತೆ ಎಲ್ಲರೂ ಒಂದಲ್ಲಾ ಒಂದು ದಿನ ಸಾಯಬೇಕು. ತಾಯಿ ಗರ್ಭದಿಂದ ಭೂಗರ್ಭ ಸೇರುವುದೇ ಜೀವನ. ಎರಡು ಗರ್ಭಗಳ ನಡುವಿನ ಜೀವನದಲ್ಲಿ ನಾಲ್ಕು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಬದುಕಬೇಕು. ಮನುಷ್ಯ ಈ ಭೂಮಿ ನನ್ನದು ಎನ್ನುತ್ತಾನೆ. ಆದರೆ, ನಾವು ಸತ್ತ ಮೇಲೆ ಸ್ಮಶಾನಕ್ಕೆ ಮೃತದೇಹ ಒಯ್ದಾಗ ಭೂಮಿ ಈ ಮನುಷ್ಯ ನನ್ನವ ಎನ್ನುತ್ತದೆ. ಹೀಗಾಗಿ ಉತ್ತಮನಾಗಿ ಬಾಳಬೇಕು ಎಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.

ಓದಿ: ಕಾವಿ ಎಂಬ ಬೆಂಕಿಗೆ ಕೈ ಹಾಕಿರುವ ಸಿದ್ದರಾಮಯ್ಯ & ಕಾಂಗ್ರೆಸ್ ಭಸ್ಮವಾಗಲಿದೆ : ಕಟೀಲ್‌ ಭವಿಷ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.