ಹಾವೇರಿ : ಪ್ರಸ್ತುತ ರಚನೆಯಾಗಲಿರುವ ಸಚಿವ ಸಂಪುಟ 2023ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆ ಗೆಲ್ಲುವ ಸಂಕಲ್ಪ ಇಟ್ಟುಕೊಂಡು ರಚನೆಯಾಗಲಿದೆ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಅಭಿಪ್ರಾಯಪಟ್ಟರು.
ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಮುಂದೆ ಬರುವ ಚುನಾವಣೆಗಳಲ್ಲಿಯೂ ಸಹ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಸಂಪುಟದಲ್ಲಿ ಪ್ರಾಂತ್ಯವಾರು, ಜಾತಿವಾರು ಅಂಶಗಳನ್ನು ಇಟ್ಟುಕೊಂಡು ಸರ್ವರಿಗೆ ಸಮಾನ ಅವಕಾಶವನ್ನ ಬಿಜೆಪಿ ವರಿಷ್ಠರು ನೀಡಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಸಂಸ್ಕೃತಿಯೇ ಬೇರೆ
ಬಿಜೆಪಿಯಂತ ಸಂಸ್ಕೃತಿ ಇಲ್ಲದ ಜನ ನಾನು ನೋಡೆ ಇಲ್ಲಾ ಎನ್ನುವ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ಬಿಜೆಪಿ ಸಂಸ್ಕೃತಿಯೇ ಬೇರೆ, ಕಾಂಗ್ರೆಸ್ ಸಂಸ್ಕೃತಿನೇ ಬೇರೆ. ಸಿದ್ದರಾಮಯ್ಯ ಬಿಜೆಪಿ ಸಂಸ್ಕೃತಿ ಹೊಗಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸಚಿವ ಸಂಪುಟದಲ್ಲಿ ನಮಗೆ ಆದ್ಯತೆ
ಕಳೆದ ಬಾರಿ ಸಚಿವ ಸಂಪುಟದಲ್ಲಿ ಯಾವ ರೀತಿ ತಮ್ಮನ್ನ ಪಕ್ಷ ನೋಡಿಕೊಂಡಿತ್ತು ಅದೇ ರೀತಿ ಈ ಬಾರಿಯೂ ಸಹ ನಮಗೆ ಆದ್ಯತೆ ನೀಡಲಾಗುತ್ತೆ. ಮಂತ್ರಿ ಸ್ಥಾನ ಹಂಚಿಕೆ ಸಾಮಾನ್ಯ ವಿಷಯವಲ್ಲ, ಅದು ಮುಳ್ಳಿನ ಕಗ್ಗಂಟು. ರಾಜ್ಯದ ಅಭಿವೃದ್ಧಿಯಿಂದ ಎಲ್ಲ ರೀತಿಯ ಚಿಂತನೆಗಳನ್ನು ನಡೆಸಿ ಕ್ಯಾಬಿನೆಟ್ ರಚನೆ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಪಾಟೀಲ್ ತಿಳಿಸಿದರು.