ETV Bharat / state

ಬಾಲಕನ ಅಪಹರಣ, ಕೊಲೆ ಪ್ರಕರಣ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು - ಹಾವೇರಿ ಬಾಲಕನ ಅಪಹರಣ ಪ್ರರಕಣ

ಮಾರ್ಚ್ 7, 2021ರಂದು ಮನೆಯಿಂದ ಕಾಣೆಯಾಗಿದ್ದ ಹನ್ನೊಂದು ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇಬ್ಬರನ್ನು ವಶಕ್ಕೆ ಪೆಡದ ಪೊಲೀಸರು
police detained two people in Haveri
author img

By

Published : Mar 12, 2021, 1:55 PM IST

Updated : Mar 12, 2021, 2:29 PM IST

ಹಾವೇರಿ: ಮಾರ್ಚ್ 7, 2021ರಂದು ಮನೆಯಿಂದ ಕಾಣೆಯಾಗಿದ್ದ ಹನ್ನೊಂದು ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರಕರಣ ಸಂಬಂಧ ಪರಿಶೀಲನೆ ನಡೆಸಿದ ಪೊಲೀಸರು

ಪ್ರಕರಣ ಸಂಬಂಧ ಪೊಲೀಸರು ರಿತೇಶ್​ ಮೇಟಿ (21) ಮತ್ತು ಓರ್ವ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಬಾಲಕನನ್ನು ಅಪಹರಣ ಮಾಡಿಕೊಂಡು ಹೋಗಿ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ. ಬಳಿಕ ಕೆರೆಯಲ್ಲಿ ಶವ ತೇಲಿ ಮೇಲೆ ಬಂದ ಪೊಲೀಸರಿಗೆ ವಿಷಯ ಗೊತ್ತಾಗುತ್ತದೆ ಎಂದು ಅರಿತು ಶವವನ್ನು ಮನೆಯ ಹಿತ್ತಲಿನಲ್ಲಿ ಹೂತಿದ್ದರು. ನಂತರ ಮನೆಯ ಸಮೀಪದ ಮುಳ್ಳುಕಂಟಿ ಬೆಳೆದಿದ್ದ ಖುಲ್ಲಾ ಜಾಗದಲ್ಲಿ ಶವವನ್ನು ಅರ್ಧಂಬರ್ಧ ಸುಟ್ಟು ಆರೋಪಿಗಳು ಪರಾರಿಯಾಗಿದ್ದರು ಎನ್ನಲಾಗುತ್ತಿದೆ.

ಓದಿ: ಹಾವೇರಿ: ಕಾಣೆಯಾಗಿದ್ದ ಬಾಲಕ ಕೊಲೆಯಾಗಿರೋ ಶಂಕೆ

ಬಾಲಕನ ಅಪಹರಣದ ನಂತರ ಆತನ ಸಂಬಂಧಿಕರು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

Last Updated : Mar 12, 2021, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.