ETV Bharat / state

ಕುರಿ ಮೈತೊಳೆಯಲು ಹೋದವ ನೀರುಪಾಲು.. ಮೃತದೇಹ ಹೊರತೆಗೆದ ಪಿಎಸ್​ಐ - ಕೆರೆಯಲ್ಲಿ ಮುಳುಗಿ ಹಾವೇರಿ ಬಾಲಕ ಸಾವು

ಕುರಿ ಮೈತೊಳೆಯಲು ಹೋದ 17 ವರ್ಷದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

boy-drowned-in-lake-at-haveri
ಕುರಿ ಮೈತೊಳೆಯಲು ಹೋದವ ನೀರುಪಾಲು
author img

By

Published : Jun 23, 2022, 7:13 PM IST

ಹಾವೇರಿ: ಕುರಿ ಮೈತೊಳೆಯಲು ಹೋದ 17 ವರ್ಷದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಗುಡ್ಡದಕೆರೆಯಲ್ಲಿ ಬಾಲಕ ಬೀರಪ್ಪ ಬಣಕಾರ(17) ನೀರುಪಾಲಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬಾಲಕನ ಮೃತದೇಹದ ಶೋಧಕಾರ್ಯ ನಡೆಸಿದರು. ಆದರೆ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಈ ಸಂದರ್ಭದಲ್ಲಿ ರಟ್ಟಿಹಳ್ಳಿ ಪಿಎಸ್ಐ ಕೃಷ್ಣಪ್ಪ ತೋಪಿನ ಅವರು ತಾವೇ ಕೆರೆಗೆ ಇಳಿದು ಬಾಲಕನ ಶವ ಹೊರತೆಗೆದಿದ್ದಾರೆ.

ಬಾಲಕನ ಶವ ಹೊರತೆಗೆಯುತ್ತಿದ್ದಂತೆ ಪೋಷಕರ ಅಕ್ರಂದನ ಮುಗಿಲುಮುಟ್ಟಿತ್ತು. ರಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ದಾವಣಗೆರೆ: ಮೃತರ ಹೆಸರಲ್ಲಿ ಜಾಬ್ ಕಾರ್ಡ್ ಮಾಡಿ ಹಣ ಹೊಡೆಯುತ್ತಿದ್ದ ಪಿಡಿಒ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.