ಹಾವೇರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮಹಿಳಾ ಕಾರ್ಯಕರ್ತರಿಲ್ಲ, ಕೇವಲ ಜೈ ಶ್ರೀ ರಾಮ್ ಎನ್ನುತ್ತಾರೆ. ಅವರಿಗೆ ಸೀತಾರಾಮ ಬೇಕಾಗಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.
ಭಾನುವಾರ ಶಿಗ್ಗಾಂವಿ ನಗರದ ಹೊರವಲಯದಲ್ಲಿರುವ ಸ್ವನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿಯವರಿಗೆ ಆರ್ಎಸ್ಎಸ್ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಇಲ್ಲಿ ಕೂಡ ಮಹಿಳೆಯರ ದುರ್ಗಾ ಸೇನೆ ಇದೆ. ನಾವು ಭಾರತ್ ಮಾತಾಕಿ ಜೈ ಅಂತೀವಿ. ಭಾರತ ಮಾತೆಯೇ ನಮ್ಮ ತಾಯಿ, ತಾಯಿ ಅಂದ್ರೆ ಕೂಡ ಹೆಣ್ಣೇ ಎಂದು ತಿರುಗೇಟು ನೀಡಿದರು.
ನಾನು ಪ್ರತಿದಿನ ಜನತಾ ದರ್ಶನ ಮಾಡುವ ಮುಖ್ಯಮಂತ್ರಿ. ಇಂದು ನನ್ನ ಕ್ಷೇತ್ರದವರು ಮಾತ್ರವಲ್ಲದೇ ಬೆಳಗಾವಿ, ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಜನರಿಂದ ಅಹವಾಲು ಸ್ವೀಕರಿಸಿದ್ದೇನೆ. ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು. ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿ ಮಣಿವಣ್ಣನ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಇಒ ಉಪಸ್ಥಿತರಿದ್ದರು.
ಇದನ್ನೂ ಓದಿ: ಹಾವೇರಿ: ಫೆಬ್ರವರಿ-ಮಾರ್ಚ್ನಲ್ಲಿ ಜಿಲ್ಲಾ ಮೆಡಿಕಲ್ ಕಾಲೇಜು ಪ್ರಾರಂಭ