ETV Bharat / state

ರಕ್ತದಾನದ ಮೂಲಕ ಬೇರೆಯವರ ಜೀವ ಉಳಿಸಲು ಮುಂದಾಗಿ: ಅರುಣಕುಮಾರ್​ ಪೂಜಾರ - Haveri latest news

ರಾಣೆಬೆನ್ನೂರ ತಾಲೂಕಿನ ಮಾಕ ಗ್ರಾಮದಲ್ಲಿ ಜನನಿ ಗ್ರಾಮೀಣ ನಗರಾಭಿವೃದ್ಧಿ ಸಂಸ್ಥೆ ಮತ್ತು ಜೆಸಿಐ ಘಟಕ ವತಿಯಿಂದ ‌ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.

ಶಾಸಕ ಅರುಣಕುಮಾರ ಪೂಜಾರ
ಶಾಸಕ ಅರುಣಕುಮಾರ ಪೂಜಾರ
author img

By

Published : Aug 30, 2020, 4:34 PM IST

Updated : Aug 30, 2020, 5:16 PM IST

ರಾಣೆಬೆನ್ನೂರ (ಹಾವೇರಿ) : ಸಮಾಜದಲ್ಲಿ ಪ್ರತಿಯೊಬ್ಬರೂ ತುರ್ತು ಸಮಯದಲ್ಲಿ ರಕ್ತದಾನ ಮಾಡಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಕರೆ ಕೊಟ್ಟರು.

ರಾಣೆಬೆನ್ನೂರ ತಾಲೂಕಿನ ಮಾಕ ಗ್ರಾಮದಲ್ಲಿ ಜನನಿ ಗ್ರಾಮೀಣ ನಗರಾಭಿವೃದ್ಧಿ ಸಂಸ್ಥೆ ಮತ್ತು ಜೆಸಿಐ ಘಟಕ ವತಿಯಿಂದ ಆಯೋಜಿಸಿದ ‌ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿ ಮಾತನಾಡಿದರು.

ಶಾಸಕ ಅರುಣಕುಮಾರ ಪೂಜಾರ

"ತುರ್ತು ಸಮಯದಲ್ಲಿ ಜೀವ ಉಳಿಸಬೇಕಾದಂತಹ ಪರಿಸ್ಥಿತಿ ಎದುರಾದಾಗ ನಾವುಗಳು ರಕ್ತದಾನ ಮಾಡಬೇಕು. ಇದರಿಂದ ಒಂದು ಜೀವವನ್ನು ಬದುಕಿಸುವ ಮೂಲಕ ಮಾನವೀಯತೆ ಎತ್ತಿ ಹಿಡಿದಂತಾಗುತ್ತದೆ" ಎಂದರು.

ಸಂಘ ಸಂಸ್ಥೆಗಳು ಇಂತಹ ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ರಕ್ತದಾನ ಬಗ್ಗೆ ಅರಿವು ಮೂಡಿಸುತ್ತಿರುವುದು ಸಂತೋಷದ ವಿಷಯ ಎಂದರು.

Last Updated : Aug 30, 2020, 5:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.