ಹಾವೇರಿ: ಪಿಎಸ್ಐ ಪರೀಕ್ಷಾ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್ನವರು ಆಪಾದನೆ ಮಾಡುವುದೇ ನಮ್ಮ ಕೆಲಸವೆಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಲ್ಲಿ ಬಿಜೆಪಿಯ ಕೈವಾಡವಿಲ್ಲ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಧರ್ಮಯುದ್ಧದ ವಿಚಾರವಾಗಿ ಮಾತನಾಡಿದ ಅವರು, ಧರ್ಮ ಇರುವವರೆಗೆ ಧರ್ಮ ಯುದ್ಧ ನಡೆಯುತ್ತದೆ. ಶ್ರೀರಾಮ ಸೇನೆಯವರು ನಮ್ಮ ಧರ್ಮದ ಪ್ರತಿಪಾದಕರಾಗಿ ಕೆಲಸ ಮಾಡಿದರೆ ಒಳ್ಳೆಯದು. ಸರ್ಕಾರದ ಆದೇಶ, ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ತಾಲಿಬಾನ್ ಸಂಸ್ಕೃತಿ ಕರ್ನಾಟಕ ಅಥವಾ ದೇಶದಲ್ಲಿ ಬರಲು ಬಿಡುವುದಿಲ್ಲ. ನಮ್ಮ ದೇಶ ತಾಲಿಬಾನ್ ಆಗಲು ಬಿಡುವುದಿಲ್ಲ, ನಮ್ಮ ದೇಶ ನಮ್ಮ ದೇಶವಾಗಿಯೇ ಉಳಿಯುತ್ತದೆ ಎಂದರು.
ಇದನ್ನೂ ಓದಿ: ತಪ್ಪಿತಸ್ಥರು ಮುಟ್ಟಿ ನೋಡ್ಕೋಬೇಕು, ಹಾಗೆ ಮಾಡ್ತೀವಿ: ಸಚಿವ ಆರಗ ಜ್ಞಾನೇಂದ್ರ