ಹಾವೇರಿ: ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತವೆ. ಅವುಗಳನ್ನು ರೈತರಿಗೆ ಮುಟ್ಟಿಸುವಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಪಾಲಾಕ್ಷಗೌಡ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ರೈತರಿಗಾಗಿ ಪ್ರಧಾನ ಮಂತ್ರಿ ಜಾರಿಗೆ ತಂದ ಸುರಕ್ಷಾ ಯೋಜನೆಯನ್ನ ಗ್ರಾಮಗಳಿಗೆ ಮುಟ್ಟಿಸುವ ಸಲುವಾಗಿ ತಾವೇ 18,000 ರೈತರ ವಿಮೆ ತುಂಬುವುದಾಗಿ ತಿಳಿಸಿದ್ದಾರೆ. ಹಾವೇರಿ ಮತ್ತು ಗದಗ ಜಿಲ್ಲೆಯ 18 ಮಂಡಲಗಳಲ್ಲಿ 18,000 ಸಾವಿರ ರೈತರ ವಿಮಾ ಹಣ ಪಾವತಿಸುವುದಾಗಿ ತಿಳಿಸಿದರು. ಇದರಿಂದ ಗ್ರಾಮಗ್ರಾಮಗಳಲ್ಲಿನ ರೈತರಿಗೆ ಯೋಜನೆ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಪ್ರತಿ ಮಂಡಲಕ್ಕೆ ಒಂದು ಸಾವಿರದಂತೆ 18 ಮಂಡಲಗಳ 18 ಸಾವಿರ ರೈತರಿಗೆ ತಾವು ವಿಮೆ ಮಾಡಿಸುವದಾಗಿ ಪಾಲಾಕ್ಷಗೌಡ ತಿಳಿಸಿದ್ದಾರೆ.