ETV Bharat / state

ಹಾನಗಲ್‌ಗೆ ಶಿವರಾಜ್‌ ಸಜ್ಜನ್, ಸಿಂಧಗಿಗೆ ರಮೇಶ್ ಭೂಸನೂರು: ಬೈಎಲೆಕ್ಷನ್‌ಗೆ ಬಿಜೆಪಿ ರೆಡಿ - Hanagal by-election bjp candidate

ಹಾನಗಲ್​ ಹಾಗು ಸಿಂಧಗಿ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಪ್ರಕಟಿಸಿದ್ದು, ಉದಾಸಿ ಕುಟುಂಬದ ಬದಲು ಉದಾಸಿ ಆಪ್ತನಿಗೆ ಮಣೆ ಹಾಕಿದೆ. ಅದೇ ರೀತಿ ಸಿಂಧಗಿಯಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ರಮೇಶ್ ಭೂಸನೂರ್​​ಗೆ ಮತ್ತೊಂದು ಅವಕಾಶ ಕಲ್ಪಿಸಿದೆ‌.

ಶಿವರಾಜ್ ಸಜ್ಜನ್
ಶಿವರಾಜ್ ಸಜ್ಜನ್
author img

By

Published : Oct 7, 2021, 9:42 AM IST

Updated : Oct 7, 2021, 11:32 AM IST

ಹಾವೇರಿ: ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಜ್ ಸಜ್ಜನ್ ಮತ್ತು ಸಿಂಧಗಿ ಕ್ಷೇತ್ರಕ್ಕೆ ರಮೇಶ್ ಭೂಸನೂರು ಆಯ್ಕೆಯಾಗಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಆಪ್ತರಲ್ಲಿ ಒಬ್ಬರಾಗಿ ಶಿವರಾಜ್ ಸಜ್ಜನ್​ ಗುರುತಿಸಿಕೊಂಡಿದ್ದು, ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ವಿಧಾನ ಪರಿಷತ್ ಸದಸ್ಯರಾಗಿ ಸಹ ಕಾರ್ಯನಿರ್ವಹಿಸಿದ್ದಾರೆ.

ಇನ್ನು ಸಿಂಧಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ಹೈಕಮಾಂಡ್ ರಮೇಶ್ ಭೂಸನೂರು ಹೆಸರನ್ನು ಅಂತಿಮಗೊಳಿಸಿದೆ. ಸಿಂಧಗಿ ಕ್ಷೇತ್ರಕ್ಕೆ ಮಾಜಿ ಶಾಸಕ ರಮೇಶ್ ಭೂಸನೂರು, ಸಂಗನಗೌಡ ಪಾಟೀಲ್ ಹಾಗೂ ಸಿದ್ದು ಬಿರಾದಾರ ಹೆಸರುಗಳ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಮೂವರ ಹೆಸರುಗಳನ್ನು ಕೇಂದ್ರ ಸಮಿತಿಗೆ ಕಳುಹಿಸಿಕೊಡಲಾಗಿತ್ತು. ಅಂತಿಮವಾಗಿ ಕಳೆದ ಬಾರಿ 9 ಸಾವಿರ ಮತಗಳಿಂದ ಪರಾಜಿತಗೊಂಡ ರಮೇಶ್ ಭೂಸನೂರ್​ಗೆ ಮತ್ತೊಂದು ಅವಕಾಶ ನೀಡುವ ನಿರ್ಧಾರವನ್ನು ಹೈಕಮಾಂಡ್ ನಾಯಕರು ತೆಗೆದುಕೊಂಡಿದ್ದಾರೆ

ಈ ತಿಂಗಳ 30ರಂದು ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳಿಗೆ ಉಪ ಚುನಾವಣೆ ನಡಯಲಿದ್ದು, ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ.

Last Updated : Oct 7, 2021, 11:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.