ETV Bharat / state

ಚೆನ್ನಮ್ಮನ ವೀರತ್ವವನ್ನು ಸಮಾಜದ ಅಭಿವೃದ್ಧಿಯಲ್ಲಿ ಮಾಡಿ ತೋರಿಸಬೇಕಿದೆ : ಬೊಮ್ಮಾಯಿ

ಆಯ್ಕೆಯಾದ ತವರು ನೆಲದಲ್ಲಿ ನಡೆದ ಕಿತ್ತೂರು ರಾಜ್ಯಮಟ್ಟದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬೊಮ್ಮಾಯಿ ನಿಮ್ಮ ಮತದ ಶಕ್ತಿಯಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದರು.

basavaraj-bommai-speech-in-haveri
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Oct 25, 2022, 7:24 AM IST

ಹಾವೇರಿ : ನಿಮ್ಮ ಮತದ ಋಣದಲ್ಲಿ ನಾನಿದ್ದೇನೆ. ಮುಖ್ಯಮಂತ್ರಿಯಾಗಿ ಕೆಲಸ ಮಾಡೋ ಒಂದೊಂದು ಕ್ಷಣವೂ ನೀವು ಕೊಟ್ಟ ಬೆಂಬಲದಿಂದ ಎಂದು ನೆನೆಯುತ್ತೇನೆ. ನೀವು ಆಯ್ಕೆ ಮಾಡಿದ್ದಕ್ಕೆ ನನಗೆ ಈ ಸ್ಥಾನವನ್ನು ಮೇಲಿನವರು ಕೊಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮತದಾರರನ್ನು ಶ್ಲಾಘಿಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಕಿತ್ತೂರು ರಾಜ್ಯಮಟ್ಟದ ಉತ್ಸವಕ್ಕೆ ಚಾಲನೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದರಿಂದ ನಿಮ್ಮ ಬಳಿಗೆ ಹೆಚ್ಚು ಬರಲು ಆಗಿಲ್ಲ. ನನ್ನನ್ನು ಕ್ಷಮಿಸಿ. ನಾವು ಕ್ಷೇತ್ರದ ಬಗ್ಗೆ ಕಂಡಿದ್ದ ಕನಸುಗಳನ್ನು ನನಸು ಮಾಡೋ ಸಮಯ ಬಂದಿದೆ. ಉದ್ಯೂಗ ಸೃಷ್ಟಿ ಮತ್ತು ಉದ್ಯಮ ಸೃಷ್ಟಿಯ ಪಣತೊಟ್ಟು ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು.

ಚೆನ್ನಮ್ಮನ ವೀರತ್ವವನ್ನು ನಾವು ನಮ್ಮ ಪ್ರಗತಿಯಲ್ಲಿ ಜಾರಿಗೆ ತರುತ್ತೇವೆ

ನಾನು ಮಾತನಾಡೋದಿಲ್ಲ. ನನ್ನ ಕೆಲಸಗಳು ಮಾತನಾಡುತ್ತವೆ. ನಾನು ಸಿಎಂ ಆದ ನಂತರ ನನ್ನ ಕೆಲಸಗಳು ಮಾತನಾಡುತ್ತಿವೆ. ಯಾವುದೇ ರಾಗ, ದ್ವೇಷಗಳಿಲ್ಲದೇ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ ಸದಾಕಾಲ ಇರಲಿ ಎಂದರು.

ಚೆನ್ನಮ್ಮನ ವೀರತ್ವವನ್ನು ನಾವು ನಮ್ಮ ಪ್ರಗತಿಯಲ್ಲಿ ತೋರಿಸಬೇಕಿದೆ. ನನಗೆ ಸದಾಕಾಲ ರಕ್ಷಣೆ ಕೊಡುವಂಥದ್ದು ಶಿಗ್ಗಾಂವಿ ಪಟ್ಟಣದ ಚೆನ್ನಮ್ಮ ಎಂದು ಬೊಮ್ಮಾಯಿ ತಿಳಿಸಿದರು. ನಂತರ ಕೆಲಕಾಲ ವೇದಿಕೆ ಮುಂಭಾಗದಲ್ಲಿ ಕುಳಿತ ಸಿಎಂ ಸಂಗೀತ ಕಾರ್ಯಕ್ರಮ ವೀಕ್ಷಿಸಿದರು. ಗುರುಕಿರಣ ಹಾಗೂ ತಂಡದವರ ಸಂಗೀತ ಕಾರ್ಯಕ್ರಮ ವೀಕ್ಷಿಸಿದ ಸಿಎಂ ಬೊಮ್ಮಾಯಿ ನಂತರ ಹುಬ್ಬಳ್ಳಿಯತ್ತ ಪಯಣ ಬೆಳೆಸಿದರು.

ಇದನ್ನೂ ಓದಿ : ಝಾನ್ಸಿರಾಣಿ ಬ್ರಿಟಿಷರ ವಿರುದ್ಧ ಹೋರಾಡುವ ಮೊದಲೇ ಕಿತ್ತೂರು ಚೆನ್ನಮ್ಮ ಹೋರಾಡಿದ್ದರು: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.