ETV Bharat / state

ಸಿಎಂ ಆಡಿಯೋ: ಕಾಂಗ್ರೆಸ್‌, ಜೆಡಿಎಸ್‌ನವರಿಂದ ರಾಜಕೀಯ ನಾಟಕ- ಬಿ.ಸಿ.ಪಾಟೀಲ್ - ಹಿರೇಕೆರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರ ಆಡಿಯೋ ವಿಚಾರವನ್ನು ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್‌ ಹಾಗು ಜೆಡಿಎಸ್‌ ನಾಯಕರು ಬಳಸಿಕೊಳ್ತಿದ್ದಾರೆ ಎಂದು ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ರು.

ಬಿ.ಸಿ.ಪಾಟೀಲ್
author img

By

Published : Nov 5, 2019, 5:29 PM IST

ಹಾವೇರಿ: ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವಿಚಾರದ ಬಗ್ಗೆ ಹಾವೇರಿ ಜಿಲ್ಲೆ ಹಿರೇಕೆರೂರಿನ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಯಡಿಯೂರಪ್ಪನವರಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ, ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್‌ ಹಾಗು ಜೆಡಿಎಸ್‌ ನಾಯಕರು ನಾಟಕ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ರು.

ಶಾಸಕ ಬಿ.ಸಿ.ಪಾಟೀಲ್

ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ಯಡಿಯೂರಪ್ಪನವರನ್ನು ನ್ಯಾಯಾಲಯದಲ್ಲಿ ಪಾರ್ಟಿ ಮಾಡಿಲ್ಲ. ನಾವು ಪಾರ್ಟಿ ಮಾಡಿದ್ದು ಸ್ಪೀಕರ್ ಅವರನ್ನಷ್ಟೇ. ಈ ವಿಚಾರದ ಹೊರತಾಗಿ ನಾವು ತಲೆಕೆಡಿಸಿಕೊಳ್ಳೋ ಅಗತ್ಯವಿಲ್ಲ ಎಂದು ಬಿ.ಸಿ ಪಾಟೀಲ್ ಹೇಳಿದ್ರು.

ಸ್ಪೀಕರ್‌ ಅವರಿಂದ ನಮಗೆ ಅನ್ಯಾಯ ಆಗಿದೆ ಎಂದು ನಾವು ಕೋರ್ಟ್‌ ಮೊರೆ ಹೋಗಿದ್ದೇವೆ. ಕೋರ್ಟ್‌ ತೀರ್ಮಾನಕ್ಕೂ ಮುನ್ನ ಯಾರ್ಯಾರೋ ಏನೇನೋ‌ ಮಾತಾಡಿದ್ರೆ ನಮಗೇನು ಸಂಬಂಧವಿಲ್ಲ. ಈ ಬಗ್ಗೆ ಯಾರೋ ಎಲ್ಲೋ ಮಾತಾಡಿದ್ದು ಸಾಕ್ಷ್ಯ ಆಗುತ್ತಾ? ಇದೆಲ್ಲ ರಾಜಕೀಯ ಕ್ರೆಡಿಟ್‌ಗಾಗಿ ಕಾಂಗ್ರೆಸ್, ಜೆಡಿಎಸ್‌ನವರು ಮಾಡ್ತಿರೋ ನಾಟಕ ಅಂತ ಪಾಟೀಲ್ ಅಭಿಪ್ರಾಯ ಪಟ್ಟರು.

ಮೈತ್ರಿ ಸರ್ಕಾರ ಬೀಳಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣರಲ್ಲ. ಕಾಂಗ್ರೆಸ್ ಜೆಡಿಎಸ್‌ನ ವ್ಯವಸ್ಥೆ ಕಾರಣ ಎಂದು ಹೇಳಿದ ಅವರು, ಕುಮಾರಸ್ವಾಮಿ ಆಡಳಿತದಲ್ಲಿ ಅಧಿಕಾರ ಕೇವಲ ಡಿಕೆಶಿ, ದಿನೇಶ್ ಗುಂಡೂರಾವ್ ಹಾಗು ಕುಮಾರಸ್ವಾಮಿ ಕುಟುಂಬಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಟೀಕಿಸಿದರು.

ದಿನೇಶ್ ಗುಂಡೂರಾವ್​ಗೆ ವಸ್ತುಸ್ಥಿತಿಯ ಬಗ್ಗೆ ಗೊತ್ತಿಲ್ಲ. ಹತ್ತು ವರ್ಷದಿಂದ ನಾನು ಕಾಂಗ್ರೆಸ್‌ನಲ್ಲಿದ್ದೆ. ಪಕ್ಷದಲ್ಲಿ ನಮ್ಮನ್ನೆಲ್ಲ ಕೂಲಿಗಳ ರೀತಿ ಬಳಸಿಕೊಂಡ್ರು. ಕುಮಾರಸ್ವಾಮಿ ಊಸರವಳ್ಳಿ ಇದ್ದ ಹಾಗೆ. ಅವರು ಯಾವಾಗ ಯಾವ ರೀತಿ ಬಣ್ಣ ಬದಲಿಸ್ತಾರೆ ಗೊತ್ತಾಗೋಲ್ಲ ಎಂದು ವ್ಯಂಗ್ಯವಾಡಿದ್ರು.

Intro:ನ್ಯಾಯಾಲಯ ಅಂದ ಮೇಲೆ ವಾದ, ವಿಚಾರಣೆ, ಮುಂದೂಡೋದು ಸಾಮಾನ್ಯ ಎಂದು ಹಾವೇರಿ ಜಿಲ್ಲೆ ಹಿರೇಕೆರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಿರೇಕೆರೂರಿನಲ್ಲಿ ಮಾತನಾಡಿದ ಅವರು
ಸಿಎಂ ಯಡಿಯೂರಪ್ಪ ಆಡಿಯೋವನ್ನ ನ್ಯಾಯಾಲಯ ತಗೆದುಕೊಂಡಿದೆ.
ಯಡಿಯೂರಪ್ಪಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಪಾಟೀಲ್ ತಿಳಿಸಿದರು.
ನಾವು ಯಡಿಯೂರಪ್ಪನವರನ್ನ ನ್ಯಾಯಾಲಯದಲ್ಲಿಪಾರ್ಟಿ ಮಾಡಿಲ್ಲ.
ನಾವು ಪಾರ್ಟಿ ಮಾಡಿದ್ದು ಸ್ಪೀಕರ್ ಅವರನ್ನ.
ಪಾರ್ಟಿ ಅಲ್ಲದವರ ಬಗ್ಗೆ ಯಾರು ಏನೋ ಹೇಳ್ತಾರೆ ಅಂತಾ ಅದರ ಬಗ್ಗೆ ತಲೆಕೆಡಿಸಿಕೊಳ್ಳೋ ಅಗತ್ಯವಿಲ್ಲ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಸ್ಪೀಕರಿಂದ ಅನ್ಯಾಯ ಆಗಿದೆ ಅಂತಾ ನಾವು ಕೋರ್ಟಿಗೆ ಹೋಗಿದ್ದೇವೆ.
ನ್ಯಾಯಾಲಯ ತೀರ್ಮಾನ ಮಾಡುತ್ತೆ.
ನ್ಯಾಯಾಲಯದ ತೀರ್ಮಾನಕ್ಕೆ ಮುನ್ನ ಯಾರ್ಯಾರೋ ಏನೇನೋ‌ ಮಾತಾಡಿದ್ರೆ ನಮಗೇನು ಸಂಬಂಧವಿಲ್ಲಾ.
ಯಾರ್ಯಾರೋ ಮಾತಾಡಿದ್ದು ಎವಿಡನ್ಸ್ ಆಗುತ್ತಾ.
ಇದೆಲ್ಲ ರಾಜಕೀಯ ಕ್ರೇಡಿಟ್ ಗಾಗಿ ಕಾಂಗ್ರೆಸ್ ಜೆಡಿಎಸ್ ನವರು ಮಾಡ್ತಿರೋ ನಾಟಕ ಅಂತಾ ಪಾಟೀಲ್ ಅಭಿಪ್ರಾಯ ಪಟ್ಟರು. ಮೈತ್ರಿ
ಸರಕಾರ ಬೀಳಲು ಬರಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣರಲ್ಲ.
ಕಾಂಗ್ರೆಸ್ ಜೆಡಿಎಸ್ ನ ವ್ಯವಸ್ಥೆ ಕಾರಣ ಎಂದು ಬಿ.ಸಿ.ಪಾಟೀಲ್ ಆರೋಪಿಸಿದರು.
ಕುಮಾರಸ್ವಾಮಿ ಆಡಳಿತದಲ್ಲಿ ಅಧಿಕಾತ ಡಿಕೆಶಿ, ದಿನೇಶ ಗುಂಡೂರಾವ್, ಕುಮಾರಸ್ವಾಮಿ ಫ್ಯಾಮಿಲಿಗೆ ಮಾತ್ರ ಮಾತ್ರ ಸೀಮಿತವಾಗಿತ್ತು.ಅದು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿತ್ತು.
ದಿನೇಶ ಗುಂಡೂರಾವ್ ಅದಕ್ಷ ಅಧ್ಯಕ್ಷ ಎಂದು ಬಿಸಿಪಿ ಆರೋಪಿಸಿದರು. ಬಂದ್ಮೇಲೆ ಪಕ್ಷದ ಸ್ಥಿತಿ ಏನಾಗಿದೆ.
ಗುಂಡುರಾವಗೆ ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲ.
ಹತ್ತು ವರ್ಷದಿಂದ ನಾನು ಕಾಂಗ್ರೆಸ್ ನಲ್ಲಿದ್ದೆ.
ನಮ್ಮನ್ನೆಲ್ಲ ಕೂಲಿಗಳ ತರಹ ಬಳಸಿಕೊಂಡ್ರು.
ಕುಮಾರಸ್ವಾಮಿ ಊಸರವಳ್ಳಿ ಇದ್ದ ಹಾಗೆ.
ಅವರು ಯಾವ್ಯಾವಾಗ ಯಾವ ತರಹ ಬಣ್ಣ ಬದಲಿಸ್ತಾರೆ ಗೊತ್ತಿಲ್ಲ.
ಅವರಿಗೆ ಅಧಿಕಾರ ಬೇಕು.
ಕುಮಾರಸ್ವಾಮಿ ಒಂಥರಾ ಇಸ್ಪೀಟ್ ನಲ್ಲಿ ಜೋಕರ್ ಇದ್ದಂತೆ.
ಯಾವ ಕಡೆ ಆಟ ಆಗುತ್ತೆ ಆ ಕಡೆಗೆ ತಿರುಗುತ್ತಾರೆ ಎಂದು ಬಿಸಿಪಿ ಆರೋಪಿಸಿದರು.Body:sameConclusion:same
ETV Bharat Logo

Copyright © 2025 Ushodaya Enterprises Pvt. Ltd., All Rights Reserved.