ರಾಣೆಬೆನ್ನೂರು: ಸುಪ್ರೀಂ ಕೋರ್ಟ್ನಲ್ಲಿರುವ ಅಯೋಧ್ಯೆ ವಿವಾದ ಕುರಿತ ತೀರ್ಪು ಶ್ರೀರಾಮಮಂದಿರ ಪರ ಬಂದರೆ ಎಲ್ಲ ದೇವಸ್ಥಾನಗಳಲ್ಲಿ ಶ್ರೀರಾಮಸೇನೆ ಪೂಜೆ ನೆರವೇರಿಸಲಾಗುವುದು ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40 ದಿನಗಳವರೆಗೆ ಸುಪ್ರೀಂಕೋರ್ಟ್ನಲ್ಲಿ ಅಯೋಧ್ಯೆ ವಿವಾದದ ವಿಚಾರಣೆ ನಡೆದಿದೆ. ಇದೇ ತಿಂಗಳು ತೀರ್ಪು ಬರಲಿದ್ದು, ತೀರ್ಪು ಬಂದ ದಿನ ಹಿಂದೂಗಳು ಪ್ರತಿ ಹಳ್ಳಿಗಳ ದೇವಸ್ಥಾನದಲ್ಲಿ ಪೂಜೆ ನೆರವೇರಿಸಬೇಕು ಎಂದು ಕರೆ ನೀಡಿದರು.
ಅಲ್ಲದೆ ಭಾರತದಲ್ಲಿರುವ ಮುಸ್ಲಿಂ ಬಂಧುಗಳು ಬಾಬರನ ವಂಶಜರಲ್ಲ, ಅವರು ಭಾರತೀಯ ಮುಸ್ಲಿಮರು. ಅಯೋಧ್ಯೆ ನಿರ್ಣಯ ಏನೇ ಬಂದರೂ ಅದನ್ನು ಸ್ವೀಕರಿಸುವ ಮನಸ್ಸು ಹೊಂದಬೇಕು ಎಂದು ಮುತಾಲಿಕ್ ಹೇಳಿದರು.