ETV Bharat / state

ಹಾವೇರಿಯಲ್ಲಿ ಗಣೇಶೋತ್ಸವಕ್ಕಾಗಿ ಅರಮನೆ ನಿರ್ಮಾಣ... ಗಣಪನ ವೀಕ್ಷಣೆಗೆ ಲಕ್ಷಾಂತರ ಜನರ ಭೇಟಿ

ಹಾವೇರಿಯಲ್ಲಿ ಈ ಬಾರಿಯ ಗಣೇಶೋತ್ಸವಕ್ಕೆ ವಂದೆ ಭಾರತಂ ಸಂಸ್ಥೆ ಆಯೋಧ್ಯಾ ಶ್ರೀರಾಮಮಂದಿರ ನಿರ್ಮಿಸಿದ್ದು, ಲಕ್ಷಾಂತರ ಜನ ಇದರ ವೀಕ್ಷಣೆ ಮಾಡಿದ್ದಾರೆ.

ಅರಮನೆ ಸೆಟ್
ಅರಮನೆ ಸೆಟ್
author img

By ETV Bharat Karnataka Team

Published : Oct 4, 2023, 11:31 AM IST

ಅರಮನೆ ಸೆಟ್​

ಹಾವೇರಿ: ರಾಣೆಬೆನ್ನೂರಿನಲ್ಲಿ ಪ್ರತಿವರ್ಷ ಸಾರ್ವಜನಿಕ ಗಣೇಶ ಸ್ಥಾಪನೆಗೆ ಹಲವು ಸಂಘಟನೆಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವೈವಿಧ್ಯಮಯ ಗಣೇಶ ಮೂರ್ತಿಗಳ ಜೊತೆಗೆ ಪ್ರಾತ್ಯಕ್ಷಿಕೆಗಳನ್ನ ನಿರ್ಮಾಣ ಮಾಡುತ್ತವೆ. ಈ ವರ್ಷ ವಂದೆ ಭಾರತಂ ಸಂಸ್ಥೆ ಆಯೋಧ್ಯಾ ಶ್ರೀರಾಮ ಮಂದಿರ ನಿರ್ಮಿಸಿದ್ದು, ಲಕ್ಷಾಂತರ ಜನ ಇದರ ವೀಕ್ಷಣೆ ಮಾಡಿದ್ದಾರೆ. ಮೇದಾರ ಸಮುದಾಯ ನಿರ್ಮಿಸಿರುವ ಐಫೆಲ್ ಟವರ್ ಪ್ರತಿರೂಪ ಕಣ್ಮನ ಸೆಳೆಯುತ್ತಿದೆ. ಈ ಮಧ್ಯೆ ರಾಣೆಬೆನ್ನೂರಿನ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಗಣೇಶ ಸ್ಥಾಪನೆಯ ಜೊತೆಗೆ ಇಸ್ರೋ ಚಂದ್ರಯಾನದ ಪ್ರಾತ್ಯಕ್ಷಿಕೆ ವೀಕ್ಷಣೆಯ ವ್ಯವಸ್ಥೆಯನ್ನ ಭಕ್ತರಿಗೆ ಮಾಡಿಸಿದೆ. ಚಂದ್ರಯಾನ-01, 2 ಮತ್ತು 3ರ ಬಗ್ಗೆ ಭಕ್ತರಿಗೆ ಸವಿಸ್ತಾರವಾಗಿ ವಿವರಿಸುವ ಪ್ರಯತ್ನವನ್ನ ಸಂಘಟನೆ ಮಾಡಿದೆ.

ಮೊದಲು ಎಲ್ಇಡಿ ಪರದೆ ಮೇಲೆ ಚಂದ್ರಯಾನದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನಂತರ ಚಂದ್ರಯಾನ ಮೂರರ ವಿಕ್ರಮ ಮತ್ತು ರೋವರ್ ಕಣ್ಣು ಮುಂದೆ ತೆರೆದುಕೊಳ್ಳುವ ಮೂಲಕ ವೀಕ್ಷಕರು ನೇರವಾಗಿ ವಿಕ್ರಮ ಮತ್ತು ರೋವರ್ ಅ​ನ್ನು ಲ್ಯಾಂಡಿಂಗ್​ ನೋಡುವ ವ್ಯವಸ್ಥೆ ಮಾಡಲಾಗಿದೆ. ಚಂದ್ರಯಾನ 3 ಹೇಗೆಲ್ಲ ನಡೆದಿದೆ ಎನ್ನುವ ರೀತಿಯಲ್ಲಿ ಈ ಪ್ರಾತ್ಯಕ್ಷಿಕೆ ಮಾಡಲಾಗಿದೆ. ಚಂದ್ರನ ದಕ್ಷಿಣ ತುದಿಯಲ್ಲಿ ನೌಕೆ ಇಳಿಸಿರುವ ಏಕೈಕ ದೇಶ ಭಾರತವಾಗಿದ್ದು, ಇದನ್ನು ಜನರಿಗೆ ಇನ್ನಷ್ಟು ಪ್ರಚಾರ ಪಡಿಸಲು ಈ ಪ್ರಾತ್ಯಕ್ಷಿಕೆ ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ಸದಸ್ಯ ಅಜಯ ಮಠ ಹೇಳಿದ್ದಾರೆ.

ಗಣೇಶ ಮೂರ್ತಿಯನ್ನ ಮಹಾರಾಷ್ಟ್ರ ಮಣ್ಣು ಬಳಸಿ ತಯಾರಿಸಲಾಗಿದ್ದು, ಅದ್ಭುತವಾಗಿದೆ. ಇನ್ನು ರಾಣೆಬೆನ್ನೂರು ಕಾಕಿ ಸಂಸ್ಥೆ ಕಳೆದ 6 ವರ್ಷಗಳಿಂದ ಗಣೇಶೋತ್ಸವ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದೆ. ಪ್ರಸ್ತುತ ವರ್ಷ ಅರಮನೆಯ ಸೆಟ್​ಹಾಕಲಿ ಅದರಲ್ಲಿ ಗಣೇಶನನ್ನ ಮಹಾರಾಜ ರೂಪದಲ್ಲಿ ನಿರ್ಮಿಸಲಾಗಿದೆ. ವೀಕ್ಷಕರು ಸೆಟ್ ಒಳಗೆ ಕಾಲಿಡುತ್ತಿದ್ದಂತೆ ದೊಡ್ಡ ಕಿಟಕಿಗಳು, ಖುರ್ಚಿಗಳು ಪರದೆಗಳು ಗಣೇಶ ಸ್ಥಾಪನೆ ಮಾಡಿರುವ ಸ್ಥಳ ಸೇರಿ ಎಲ್ಲ ಸ್ಥಳಗಳು ಅರಮನೆಯಂತೆ ಕಾಣ ಸಿಗುತ್ತದೆ. ಗಣೇಶ ವೀಕ್ಷಣೆಗೆ ಬರುವ ಜನರಿಗೆ ಬಾಹುಬಲಿ 2ರ ರಥದಲ್ಲಿನ ಗಣೇಶನ ಪ್ರತಿರೂಪ ಆಕರ್ಷಿಸುತ್ತದೆ. ಕೆಲ ವರ್ಷಗಳಿಂದ ಫೈಬರ್‌ನಲ್ಲಿ ನಿರ್ಮಿಸಿದ್ದ ಬಾಹುಬಲಿ 2 ರಥದಲ್ಲಿನ ಗಣೇಶ ಮೂರ್ತಿ ಸಂರಕ್ಷಿಸಿಕೊಂಡು ಬರಲಾಗುತ್ತಿದೆ.

ಇನ್ನು ರಾಮಾಯಣದಲ್ಲಿ ಸೀತಾ ಸ್ವಯಂವರ ಹಾಗೂ ಮಹಾಭಾರತದ ದ್ರೌಪದಿ ಸ್ವಯಂವರಗಳನ್ನ ವೀಕ್ಷಕರಿಗಾಗಿ ನಿರ್ಮಿಸಲಾಗಿದೆ. ಅರಮನೆಯ ಹೊರಗಿನ ಸೆಟ್ ಸಹ ಆದ್ಭುತವಾಗಿದೆ. ಉತ್ತರಪ್ರದೇಶದ ಕಲಾವಿದರು ಸುಮಾರು ತಿಂಗಳು ಕಾಲ ಗಣೇಶನ ಸೆಟ್ ನಿರ್ಮಿಸಿದ್ದು ವಿಶೇಷ.

ಇದನ್ನೂ ಓದಿ: ಹಾವೇರಿ: ಮೇದಾರ ಸಮುದಾಯದವರಿಂದ ಐಫೆಲ್​ ಟವರ್ ನಿರ್ಮಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.