ETV Bharat / state

ಪೊಲೀಸರಿಗೆ ಪಾನೀಯ, ಮಾಸ್ಕ್ ವಿತರಣೆ ಮಾಡಿದ ಮಂಗಳಮುಖಿಯರು - ಮಾಸ್ಕ್ ‌ಮತ್ತು ತಂಪು ಪಾನೀಯ ವಿತರಣೆ

ನಗರದ ಶಹರ ಠಾಣೆಯ ಪೊಲೀಸರಿಗೆ ಮಂಗಳಮುಖಿಯರು ಮಾಸ್ಕ್ ಮತ್ತು ತಂಪು ಪಾನೀಯ ವಿತರಣೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Auspicious women distributed drinks and masks to the police
ಪೊಲೀಸರಿಗೆ ಪಾನೀಯ, ಮಾಸ್ಕ್ ವಿತರಣೆ ಮಾಡಿದ ಮಂಗಳಮುಖಿಯರು
author img

By

Published : Apr 1, 2020, 7:54 PM IST

ಹಾವೇರಿ/ರಾಣೆಬೆನ್ನೂರು: ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಂಗಳಮುಖಿಯರು ಸಹ ಮಾಸ್ಕ್ ‌ಮತ್ತು ತಂಪು ಪಾನೀಯ ವಿತರಣೆ ಮಾಡುತ್ತಿದ್ದಾರೆ.

ಪೊಲೀಸರಿಗೆ ಪಾನೀಯ, ಮಾಸ್ಕ್ ವಿತರಣೆ ಮಾಡಿದ ಮಂಗಳಮುಖಿಯರು

ಮಂಗಳಮುಖಿಯರು ನಗರದ ಶಹರ ಠಾಣೆಯ ಪೊಲೀಸರಿಗೆ ಮಾಸ್ಕ್ ಮತ್ತು ತಂಪು ಪಾನೀಯಗಳನ್ನು ನೀಡಿದ್ರು. ಬಳಿಕ ಮಾತನಾಡಿದ ಮಂಗಳಮುಖಿ ನಾಜೀಯಾ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹಲವು ಜನರು ಪೊಲೀಸರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ ದಾನ ಮಾಡುತ್ತಿದ್ದಾರೆ.

ಅದರಂತೆ ನಮಗೂ ಸಹ ಸೇವೆ ಮಾಡಬೇಕು ಎಂಬ ಮನಸ್ಸು ಬಂತು. ಅದಕ್ಕೆ ನಾವುಗಳು ಎಲ್ಲರೂ ಸೇರಿ ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.