ETV Bharat / state

ಸಹಾಯಕ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ.. ಗರ್ಭಿಣಿಯಾದ ಬಿ.ಕಾಂ ವಿದ್ಯಾರ್ಥಿನಿ! - ಹಾವೇರಿಯಲ್ಲಿ ಯುವತಿ ಮೇಲೆ ಸಹಾಯಕ ಪ್ರಾಧ್ಯಾಪಕನಿಂದ ಅತ್ಯಾಚಾರ

ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಮೇಲೆ ಸಹಾಯಕ ಪ್ರಾಧ್ಯಾಪಕ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನಲ್ಲಿ ನಡೆದಿದೆ.

Assistant professor of sexual harassment on student, Assistant professor rape on young woman in Haveri, Haveri rape news, ವಿದ್ಯಾರ್ಥಿನಿ ಮೇಲೆ ಸಹಾಯಕ ಪ್ರಾಧ್ಯಾಪಕದಿಂದ ಲೈಂಗಿಕ ಕಿರುಕುಳ , ಹಾವೇರಿಯಲ್ಲಿ ಯುವತಿ ಮೇಲೆ ಸಹಾಯಕ ಪ್ರಾಧ್ಯಾಪಕನಿಂದ ಅತ್ಯಾಚಾರ, ಹಾವೇರಿ ಅತ್ಯಾಚಾರ ಸುದ್ದಿ,
ಸಹಾಯಕ ಪ್ರಾಧ್ಯಾಪಕ ಮೇಲೆ ಅತ್ಯಾಚಾರ ಆರೋಪ.
author img

By

Published : Jun 7, 2022, 1:35 PM IST

Updated : Jun 7, 2022, 2:45 PM IST

ಹಾವೇರಿ: ವಿದ್ಯಾರ್ಥಿನಿ ಮೇಲೆ ಸಹಾಯಕ ಪ್ರಾಧ್ಯಾಪಕ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣ ಶಿಗ್ಗಾಂವಿ ತಾಲೂಕಿಲ್ಲಿ ನಡೆದಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಈ ಆರೋಪ ಕೇಳಿಬಂದಿದೆ.

ನಿಂಗಪ್ಪ‌ ಕಲಕೋಟಿ ಎಂಬ ಪ್ರಾಧ್ಯಾಪಕ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ. ಮನೆ ಪಾಠ ಹೇಳಿಕೊಡುವುದಾಗಿ ಕರೆಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಒಂದೂವರೆ ವರ್ಷಗಳಿಂದ ತನ್ನ ಮೇಲೆ ಏಳೆಂಟು ಬಾರಿ ಸಹಾಯಕ ಪ್ರಾಧ್ಯಾಪಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವಿದ್ಯಾರ್ಥಿನಿ ದೂರಿದ್ದಾಳೆ.

ಓದಿ: ಬೆಚ್ಚಿಬಿದ್ದ ಸಿಎಂ ಯೋಗಿ ನಾಡು: ಉನ್ನಾವೋದಲ್ಲಿ 13ರ ದಲಿತ ಬಾಲಕಿ ಮೇಲೆ ರೇಪ್​​, ಬರ್ಬರ ಕೊಲೆ

ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್​ ಸಹಾಯಕ ಪ್ರಾಧ್ಯಾಪಕನಾಗಿ ನಿಂಗಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ನಿರಂತರ ಲೈಂಗಿಕ ದೌರ್ಜನ್ಯದಿಂದ ವಿದ್ಯಾರ್ಥಿನಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ವಿಷಯ ತಿಳಿದ ಆರೋಪಿ ನಿಂಗಪ್ಪ ವಿದ್ಯಾರ್ಥಿನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.

ವಿದ್ಯಾರ್ಥಿನಿಯನ್ನ ಹಾವೇರಿ ನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ನಿಂಗಪ್ಪ ವಿರುದ್ಧ ಸವಣೂರು ಪೊಲೀಸ್ ಠಾಣೆಯಲ್ಲಿ ಐಪಿಸಿ 376 (2)(N) ಮತ್ತು 506 ಅಡಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jun 7, 2022, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.